ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಗುರುತುಗಳನ್ನೂ ಅದ್ಭುತಗಳನ್ನೂ ನಿನ್ನ ಕಣ್ಣುಗಳು ನೋಡಿದವಲ್ಲಾ?
1ಹೋರೇಬಿನಲ್ಲಿ ಅವರ ಸಂಗಡ ಮಾಡಿದ ಒಡಂಬಡಿಕೆಯ ಹೊರತಾಗಿ ಇಸ್ರಾ ಯೇಲ್ ಮಕ್ಕಳ ಸಂಗಡ ಮಾಡಬೇಕೆಂದು ಕರ್ತನು ಮೋಶೆಗೆ ಮೋವಾಬಿನ ದೇಶದಲ್ಲಿ ಆಜ್ಞಾಪಿಸಿದ ಒಡಂಬಡಿಕೆಯ ಮಾತುಗಳು ಇವೇ;
2ಮೋಶೆಯು ಇಸ್ರಾಯೇಲ್ಯರನ್ನೆಲ್ಲಾ ಕರೆದು ಅವ ರಿಗೆ--ಕರ್ತನು ಐಗುಪ್ತದೇಶದಲ್ಲಿ ನಿಮ್ಮ ಕಣ್ಣುಗಳ ಮುಂದೆ ಫರೋಹನಿಗೂ ಅವನ ಎಲ್ಲಾ ಸೇವಕ ರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿದವುಗಳನ್ನೆಲ್ಲಾ ನೋಡಿದ್ದೀರಿ.
3ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಗುರುತುಗಳನ್ನೂ ಅದ್ಭುತಗಳನ್ನೂ ನಿನ್ನ ಕಣ್ಣುಗಳು ನೋಡಿದವಲ್ಲಾ?
4ಆದಾಗ್ಯೂ ಕರ್ತನು ನಿಮಗೆ ಇಂದಿನ ವರೆಗೂ ತಿಳುಕೊಳ್ಳುವ ಹೃದಯ ವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ಕೊಡಲಿಲ್ಲ.
5ನಾನು ನಾಲ್ವತ್ತು ವರುಷ ನಿಮ್ಮನ್ನು ಅರಣ್ಯದಲ್ಲಿ ನಡಿಸಿದೆನು; ನಿಮ್ಮ ಮೇಲಿರುವ ವಸ್ತ್ರ ಗಳು ಹಳೇವಾಗಲಿಲ್ಲ; ನಿಮ್ಮ ಪಾದಗಳಲ್ಲಿರುವ ಕೆರಗಳು ಹಳೇವಾಗಲಿಲ್ಲ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ