ಜೆಕರ್ಯ 13:2

ಸೈನ್ಯಗಳ ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು; ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲ; ಪ್ರವಾದಿಗಳನ್ನೂ ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿ ಹೋಗುವಂತೆ ಮಾಡುವೆನು ಎಂದು ಅನ್ನುತ್ತಾನೆ.

ಸಂದರ್ಭದೊಂದಿಗೆ ಓದಿ · ಜೆಕರ್ಯ 13

1ಆ ದಿನದಲ್ಲಿ ದಾವೀದನ ಮನೆತನದ ವರಿಗೂ ಯೆರೂಸಲೇಮಿನ ನಿವಾಸಿಗ ಳಿಗೂ ಪಾಪದ ನಿಮಿತ್ತ ಮತ್ತು ಅಶುದ್ಧತ್ವದ ನಿಮಿತ್ತ ಬುಗ್ಗೆ ತೆರೆಯಲ್ಪಡುವದು.

2ಸೈನ್ಯಗಳ ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನಾನು ವಿಗ್ರಹಗಳ ಹೆಸರುಗಳನ್ನು ದೇಶದೊಳಗಿಂದ ಕಡಿದುಬಿಡುವೆನು; ಅವು ಇನ್ನು ಮೇಲೆ ಜ್ಞಾಪಕಕ್ಕೆ ಬರುವದಿಲ್ಲ; ಪ್ರವಾದಿಗಳನ್ನೂ ಅಶುದ್ಧ ಆತ್ಮವನ್ನೂ ದೇಶದೊಳಗಿಂದ ತೊಲಗಿ ಹೋಗುವಂತೆ ಮಾಡುವೆನು ಎಂದು ಅನ್ನುತ್ತಾನೆ.

3ಆಗುವದೇನಂದರೆ, ಯಾವನಾದರೂ ಇನ್ನು ಪ್ರವಾದಿ ಸಿದರೆ ಅವನ ಹೆತ್ತವರಾದ ತಂದೆತಾಯಿಗಳು ಅವ ನಿಗೆ--ನೀನು ಬದುಕಬಾರದು, ಕರ್ತನ ಹೆಸರಿನಲ್ಲಿ ಸುಳ್ಳು ಹೇಳುತ್ತೀ ಎಂದು ಹೇಳುವರು; ಅವನು ಪ್ರವಾದಿಸುವಾಗ ಅವನ ಹೆತ್ತವರಾದ ತಂದೆತಾಯಿ ಗಳು ಅವನನ್ನು ನೂಕಿಬಿಡುವರು.

4ಆ ದಿವಸದಲ್ಲಿ ಆಗುವದೇನಂದರೆ, ಪ್ರವಾದಿಗಳು ಪ್ರವಾದಿಸುವಾಗ ಅವರು ತಮ್ಮ ತಮ್ಮ ದರ್ಶನಗಳಿಗೆ ನಾಚಿಕೆಪಡುವರು; ವಂಚಿಸುವ ಹಾಗೆ ಒರಟಾದ ವಸ್ತ್ರವನ್ನು ಹಾಕಿಕೊಳ್ಳರು.

ಜೆಕರ್ಯ 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी