ಅಪೊಸ್ತಲರ ಕೃತ್ಯಗಳು 6:3

ಆದದರಿಂದ ಸಹೋದರರೇ, ಈ ಕೆಲಸದ ಮೇಲೆ ನಾವು ನೇಮಿಸುವಂತೆ ಪವಿತ್ರಾತ್ಮನಿಂದಲೂ ಜ್ಞಾನ ದಿಂದಲೂ ತುಂಬಿದ ಯಥಾರ್ಥವಾದ ಏಳು ಮಂದಿ ಯನ್ನು ನಿಮ್ಮಲ್ಲಿಂದ ಆರಿಸಿಕೊಳ್ಳಿರಿ.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 6

1ಆ ದಿವಸಗಳಲ್ಲಿ ಶಿಷ್ಯರ ಸಂಖ್ಯೆ ಹೆಚ್ಚಾದಾಗ ಪ್ರತಿ ದಿನದ ಉಪಚಾರದಲ್ಲಿ ಗ್ರೀಕರ ವಿಧವೆಯರು ಅಲಕ್ಷ್ಯಮಾಡಲ್ಪಟ್ಟದ್ದರಿಂದ ಇಬ್ರಿಯ ರಿಗೆ ವಿರುದ್ಧವಾಗಿ ಅವರು ಗುಣುಗುಟ್ಟಿದರು.

2ಆಗ ಆ ಹನ್ನೆರಡು ಮಂದಿಯು ಶಿಷ್ಯರ ಸಮೂಹವನ್ನು ತಮ್ಮ ಬಳಿಗೆ ಕರೆದು--ನಾವು ದೇವರ ವಾಕ್ಯವನ್ನು ಬಿಟ್ಟು ಉಪಚಾರ ಮಾಡುವದು ವಿಹಿತವಾದದ್ದಲ್ಲ.

3ಆದದರಿಂದ ಸಹೋದರರೇ, ಈ ಕೆಲಸದ ಮೇಲೆ ನಾವು ನೇಮಿಸುವಂತೆ ಪವಿತ್ರಾತ್ಮನಿಂದಲೂ ಜ್ಞಾನ ದಿಂದಲೂ ತುಂಬಿದ ಯಥಾರ್ಥವಾದ ಏಳು ಮಂದಿ ಯನ್ನು ನಿಮ್ಮಲ್ಲಿಂದ ಆರಿಸಿಕೊಳ್ಳಿರಿ.

4ಆದರೆ ನಾವು ಪ್ರಾರ್ಥನೆಯಲ್ಲಿಯೂ ವಾಕ್ಯೋಪದೇಶದಲ್ಲಿಯೂ ನಿರತರಾಗಿರುವಂತೆ ನಮ್ಮನ್ನು ಒಪ್ಪಿಸಿಕೊಡುವೆವು ಎಂದು ಹೇಳಿದನು.

5ಈ ಮಾತು ಸಮೂಹಕ್ಕೆಲ್ಲಾ ಒಪ್ಪಿಗೆಯಾಯಿತು; ಆಗ ಅವರು ನಂಬಿಕೆಯಿಂದಲೂ ಪವಿತ್ರಾತ್ಮನಿಂದಲೂ ಭರಿತನಾದ ಸ್ತೆಫನನೂ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿ ಯೋಕ್ಯದ ನಿಕೊಲಾಯ ಎಂಬವರನ್ನೂ ಆರಿಸಿಕೊಂಡು

ಅಪೊಸ್ತಲರ ಕೃತ್ಯಗಳು 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी