ಆದಿಕಾಂಡ 26:20

ಗೆರಾರಿನ ಮಂದೆಯನ್ನು ಮೇಯಿಸುವವರು --ಈ ನೀರು ನಮ್ಮದು ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ ಏಸೆಕ್‌ ಎಂದು ಹೆಸರಿಟ್ಟನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 26

18ಇದಲ್ಲದೆ ಇಸಾಕನು ತನ್ನ ತಂದೆಯಾದ ಅಬ್ರಹಾ ಮನ ದಿನಗಳಲ್ಲಿ ಅಗಿದಂಥ ಬಾವಿಗಳನ್ನು ತಿರಿಗಿ ಅಗಿದನು. ಯಾಕಂದರೆ ಅಬ್ರಹಾಮನು ಸತ್ತ ಮೇಲೆ ಫಿಲಿಷ್ಟಿಯರು ಅವುಗಳನ್ನು ಮುಚ್ಚಿದ್ದರು. ಅವುಗಳಿಗೆ ತನ್ನ ತಂದೆಯು ಕೊಟ್ಟ ಹೆಸರುಗಳ ಪ್ರಕಾರವೇ ಅವನು ಅವುಗಳಿಗೆ ಹೆಸರು ಕೊಟ್ಟನು.

19ಇಸಾಕನ ಸೇವಕರು ತಗ್ಗಿನಲ್ಲಿ ಅಗಿದಾಗ ಅಲ್ಲಿ ಅವರಿಗೆ ಒಂದು ಉಕ್ಕುವ ಒರತೆಯ ಬಾವಿಯು ಸಿಕ್ಕಿತು.

20ಗೆರಾರಿನ ಮಂದೆಯನ್ನು ಮೇಯಿಸುವವರು --ಈ ನೀರು ನಮ್ಮದು ಎಂದು ಇಸಾಕನ ಮಂದೆಯನ್ನು ಮೇಯಿಸುವವರ ಸಂಗಡ ಜಗಳವಾಡಿದರು. ಅವರು ಅವನ ಸಂಗಡ ಜಗಳವಾಡಿದ ಕಾರಣ ಅವನು ಆ ಬಾವಿಗೆ ಏಸೆಕ್‌ ಎಂದು ಹೆಸರಿಟ್ಟನು.

21ತರುವಾಯ ಅವರು ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿಯೂ ಅವರು ಜಗಳವಾಡಿದಾಗ ಅವನು ಅದಕ್ಕೆ ಸಿಟ್ನಾ ಎಂದು ಹೆಸರಿಟ್ಟನು.

22ಅಲ್ಲಿಂದ ಅವನು ಹೊರಟುಹೋಗಿ ಇನ್ನೊಂದು ಬಾವಿಯನ್ನು ಅಗಿದಾಗ ಅದಕ್ಕಾಗಿ ಅವರು ಜಗಳವಾಡಲಿಲ್ಲ. ಅದಕ್ಕೆ ಅವನು--ಈಗ ಕರ್ತನು ನಮಗೆ ಸ್ಥಳವನ್ನು ಮಾಡಿದ್ದಾನೆ; ನಾವು ಈ ದೇಶದಲ್ಲಿ ಅಭಿವೃದ್ಧಿ ಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್‌ ಎಂದು ಹೆಸರಿಟ್ಟನು.

ಆದಿಕಾಂಡ 26 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी