ಯೆರೆಮಿಯ 26:20

ಇದಲ್ಲದೆ ಕಿರ್ಯತ್‌ಯಾರೀಮಿನವನಾದ ಶೆಮಾ ಯನ ಮಗನಾದ ಊರೀಯನೆಂಬವನು ಸಹ ಕರ್ತನ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆವಿಾಯನ ಎಲ್ಲಾ ಮಾತುಗಳ ಪ್ರಕಾರ ಈ ಪಟ್ಟಣಕ್ಕೂ ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 26

18ಮೋರೇಷೆತಿನವನಾದ ವಿಾಕಾಯನು ಯೆಹೂದದ ಅರಸನಾದ ಹಿಜ್ಕೀಯನ ದಿನಗಳಲ್ಲಿ ಪ್ರವಾದಿಸಿ ಯೆಹೂದದ ಜನರಿಗೆಲ್ಲಾ ಹೇಳಿದ್ದೇನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ಚೀಯೋನು ಹೊಲದ ಹಾಗೆ ಉಳಲ್ಪಡು ವದು; ಯೆರೂಸಲೇಮು ದಿಬ್ಬಗಳಾಗುವದು; ಮಂದಿ ರದ ಬೆಟ್ಟವು ಅಡವಿಯ ಉನ್ನತ ಸ್ಥಳವಾಗುವದು.

19ಅವನನ್ನು ಯೆಹೂದ ಅರಸನಾದ ಹಿಜ್ಕೀಯನೂ ಸಮಸ್ತ ಯೆಹೂದವೂ ಕೊಂದುಹಾಕಿದರೋ? ಅವನು ಕರ್ತನಿಗೆ ಭಯಪಟ್ಟು ಕರ್ತನ ಸಮ್ಮುಖದಲ್ಲಿ ಮೊರೆ ಯಿಟ್ಟನಲ್ಲವೋ? ಆ ಮೇಲೆ ಕರ್ತನು ಅವರಿಗೆ ವಿರೋಧವಾಗಿ ಮಾತನಾಡಿದ ಕೇಡಿನ ವಿಷಯದಲ್ಲಿ ಪಶ್ಚಾತ್ತಾಪಪಡಲಿಲ್ಲವೋ? ಆದರೆ ನಾವು ದೊಡ್ಡ ಕೇಡನ್ನು ನಮ್ಮ ಪ್ರಾಣಗಳ ಮೇಲೆ ತಂದುಕೊಳ್ಳಬಹುದು.

20ಇದಲ್ಲದೆ ಕಿರ್ಯತ್‌ಯಾರೀಮಿನವನಾದ ಶೆಮಾ ಯನ ಮಗನಾದ ಊರೀಯನೆಂಬವನು ಸಹ ಕರ್ತನ ಹೆಸರಿನಲ್ಲಿ ಪ್ರವಾದಿಸುತ್ತಿರಲಾಗಿ ಯೆರೆವಿಾಯನ ಎಲ್ಲಾ ಮಾತುಗಳ ಪ್ರಕಾರ ಈ ಪಟ್ಟಣಕ್ಕೂ ಈ ದೇಶಕ್ಕೂ ವಿರೋಧವಾಗಿ ಪ್ರವಾದಿಸಿದನು.

21ಆಗ ಅರಸನಾದ ಯೆಹೋಯಾಕೀಮನೂ ಅವನ ಪರಾಕ್ರಮಶಾಲಿಗಳೆ ಲ್ಲರೂ ಪ್ರಧಾನರೆಲ್ಲರೂ ಅವನ ಮಾತುಗಳನ್ನು ಕೇಳಿ ದಾಗ ಅರಸನು ಅವನನ್ನು ಕೊಂದುಹಾಕುವದಕ್ಕೆ ಹುಡುಕಿದನು; ಅದರೆ ಊರೀಯನು ಅದನ್ನು ಕೇಳಿ ಭಯಪಟ್ಟು ಓಡಿಹೋಗಿ ಐಗುಪ್ತಕ್ಕೆ ಸೇರಿಕೊಂಡನು.

22ಆದರೆ ಅರಸನಾದ ಯೆಹೋಯಾಕೀಮನು ಐಗು ಪ್ತಕ್ಕೆ ಜನರನ್ನು, ಅಂದರೆ ಅಕ್ಬೋರನ ಮಗನಾದ ಎಲ್ನಾಥಾನನನ್ನೂ ಅವನ ಸಂಗಡ ಇನ್ನೂ ಕೆಲವರನ್ನೂ ಐಗುಪ್ತಕ್ಕೆ ಕಳುಹಿಸಿದನು.

ಯೆರೆಮಿಯ 26 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी