ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಗಿಲ್ಯಾದ್ ಮೊದಲುಗೊಂಡು ಅರ್ನೋನ್ ನದಿಯ ವರೆಗೆ ಕೊಟ್ಟೆನು.
14ಮನಸ್ಸೆಯ ಮಗನಾದ ಯಾಯಾರನು ಅರ್ಗೋ ಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯ ವರೆಗೆ ತಕ್ಕೊಂಡು ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನ ವರೆಗೆ ಹವ್ವೊತ್ ಯಾಯಾ ರೆಂದು ಹೆಸರಿಟ್ಟನು.
15ಗಿಲ್ಯಾದನ್ನು ಮಾಕೀರನಿಗೆ ಕೊಟ್ಟೆನು.
16ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಗಿಲ್ಯಾದ್ ಮೊದಲುಗೊಂಡು ಅರ್ನೋನ್ ನದಿಯ ವರೆಗೆ ಕೊಟ್ಟೆನು.
17ಬೈಲನ್ನೂ ಯೊರ್ದನನ್ನೂ ಅದರ ಸೀಮೆಯನ್ನೂ ಕಿನ್ನೆರೆತ್ ಮೊದಲುಗೊಂಡು ಪೂರ್ವದಲ್ಲಿರುವ ಅಷ್ಡೋದ್ ಪಿಸ್ಗಾದ ಕೆಳಗಿರುವ ಉಪ್ಪಿನಸಮುದ್ರವಾದ ಬೈಲು ಸಮುದ್ರದ ವರೆಗೆ ಕೊಟ್ಟೆನು.
18ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ನಿಮಗೆ ಈ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟಿದ್ದಾನೆ; ಯುದ್ಧಸ್ಥ ರಾಗಿರುವ ನೀವೆಲ್ಲರು ನಿಮ್ಮ ಸಹೋದರರಾದ ಇಸ್ರಾಯೇಲ್ ಮಕ್ಕಳ ಮುಂದೆ ಆಯುಧ ಧರಿಸಿ ಕೊಂಡು ಹಾದುಹೋಗಬೇಕು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ