ಯೆಶಾಯ 22:4

ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.

ಸಂದರ್ಭದೊಂದಿಗೆ ಓದಿ · ಯೆಶಾಯ 22

2ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣ ವೇ ಸಂಭ್ರಮದ ಪಟ್ಟಣವೇ, ನಿನ್ನಲ್ಲಿ ಕೊಂದುಹಾಕಲ್ಪ ಟ್ಟವರು ಕತ್ತಿಯಿಂದ ಕೊಂದುಹಾಕಲ್ಪಟ್ಟವರಲ್ಲ ಅಥವಾ ಯುದ್ಧದಲ್ಲಿ ಸತ್ತವರಲ್ಲ.

3ನಿನ್ನ ಅಧಿಕಾರಸ್ಥರೆಲ್ಲರು ಒಟ್ಟಿಗೆ ಓಡಿ ಬಿಲ್ಲುಗಾರರಿಲ್ಲದೆ ಸೆರೆಯಾಗಿದ್ದಾರೆ. ದೂರದಿಂದ ಓಡಿಬಂದು ನಿನ್ನಲ್ಲಿ ಸಿಕ್ಕಿದವರೆಲ್ಲ ರೊಂದಿಗೆ ಕಟ್ಟುಬಿದ್ದಿದ್ದಾರೆ.

4ಹೀಗಿರಲು ನನ್ನ ಕಡೆ ಯಿಂದ ದೃಷ್ಟಿ ತಿರುಗಿಸಿರಿ. ಬಹುಸಂಕಟದಿಂದ ನಾನು ಅಳುವೆನು. ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವದಕ್ಕೆ ತವಕಗೊಳ್ಳದಿರಿ ಅಂದೆನು.

5ಸೈನ್ಯಗಳ ದೇವರಾದ ಕರ್ತನಿಗೆ ದರ್ಶ ನದ ತಗ್ಗಿನಲ್ಲಿ ಶ್ರಮೆಯ ತುಳಿದಾಟದ ಗಲಿಬಿಲಿಯ ದಿನವದೆ, ಗೋಡೆ ಒಡೆಯೋಣವು ಪರ್ವತದ ಕಡೆಗೆ ಹೋಗೋಣವು ಉಂಟಾಗುವದು.

6ಏಲಾಮಿನ ಮನುಷ್ಯರ ಕುದುರೆ ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿ ಯನ್ನು ತೆಗೆದರು.

ಯೆಶಾಯ 22 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी