ಆದಿಕಾಂಡ 37:23

ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ ಅವರು ಯೋಸೇಫನ ಮೇಲಿದ್ದ ಬಣ್ಣದ ಅಂಗಿಯನ್ನು ತೆಗೆದರು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 37

21ಆದರೆ ರೂಬೇನನು ಅದನ್ನು ಕೇಳಿ ಅವನನ್ನು ಅವರ ಕೈಗಳಿಂದ ತಪ್ಪಿಸಿ--ಅವನನ್ನು ಕೊಲ್ಲುವದು ಬೇಡ ಅಂದನು.

22ರೂಬೇನನು ಅವನನ್ನು ಅವರ ಕೈಗಳಿಂದ ತಪ್ಪಿಸಿ ತನ್ನ ತಂದೆಯ ಬಳಿಗೆ ತಿರಿಗಿ ಕರೆದುಕೊಂಡು ಹೋಗುವ ಹಾಗೆ ಅವರಿಗೆ--ರಕ್ತ ಚೆಲ್ಲಬೇಡಿರಿ, ಕಾಡಿನಲ್ಲಿರುವ ಈ ತಗ್ಗಿನಲ್ಲಿ ಅವನನ್ನು ಹಾಕಿರಿ; ಆದರೆ ಅವನ ಮೇಲೆ ಕೈಹಾಕಬೇಡಿರಿ ಅಂದನು.

23ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ ಅವರು ಯೋಸೇಫನ ಮೇಲಿದ್ದ ಬಣ್ಣದ ಅಂಗಿಯನ್ನು ತೆಗೆದರು.

24ಅವನನ್ನು ತಕ್ಕೊಂಡು ತಗ್ಗಿನಲ್ಲಿ ಹಾಕಿದರು; ಆ ತಗ್ಗು ನೀರಿಲ್ಲದೆ ಬರಿದಾಗಿತ್ತು.

25ಅವರು ಊಟಕ್ಕೆ ಕೂತುಕೊಂಡಾಗ ತಮ್ಮ ಕಣ್ಣುಗಳನ್ನೆತ್ತಿ ನೋಡಲಾಗಿ ಇಗೋ, ಇಷ್ಮಾಯೇಲ್ಯರ ಗುಂಪು ಗಿಲ್ಯಾದಿನಿಂದ ಬರುತ್ತಿತ್ತು. ಅವರ ಒಂಟೆಗಳು ಸಾಂಬ್ರಾಣಿ ಸುಗಂಧತೈಲ ರಕ್ತಬೋಳಗಳನ್ನು ಹೊರು ತ್ತಿದ್ದವು. ಅವರು ಅವುಗಳನ್ನು ಐಗುಪ್ತಕ್ಕೆ ತೆಗೆದು ಕೊಂಡು ಹೋಗುತ್ತಿದ್ದರು.

ಆದಿಕಾಂಡ 37 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी