ಧರ್ಮೋಪದೇಶಕಾಂಡ 26:2

ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಿಂದ ನೀನು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಪುಟ್ಟಿಯ ಲ್ಲಿಟ್ಟು ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತಕ್ಕೊಂಡು ಹೋಗಬೇಕು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 26

1ಇದಲ್ಲದೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ದೇಶಕ್ಕೆ ನೀನು ಬಂದು ಅದನ್ನು ಸ್ವಾಧೀನಮಾಡಿಕೊಂಡು ಅದರಲ್ಲಿ ವಾಸಮಾಡುವಾಗ

2ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಿಂದ ನೀನು ತರತಕ್ಕ ಭೂಮಿಯ ಎಲ್ಲಾ ಹುಟ್ಟುವಳಿಯ ಪ್ರಥಮ ಫಲವನ್ನು ಪುಟ್ಟಿಯ ಲ್ಲಿಟ್ಟು ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳಕ್ಕೆ ತಕ್ಕೊಂಡು ಹೋಗಬೇಕು.

3ಅಲ್ಲಿ ಆ ಕಾಲದಲ್ಲಿರುವ ಯಾಜಕನ ಬಳಿಗೆ ಹೋಗಿ ಅವನಿಗೆ--ಕರ್ತನು ನಮ್ಮ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣಮಾಡಿದ ದೇಶದಲ್ಲಿ ನಾನು ಸೇರಿದ್ದೇನೆಂದು ಈಹೊತ್ತು ನಿನ್ನ ದೇವರಾದ ಕರ್ತನಿಗೆ ಪ್ರಮಾಣಮಾಡುತ್ತೇನೆ ಎಂದು ಹೇಳಬೇಕು.

4ಆಗ ಯಾಜಕನು ಪುಟ್ಟಿಯನ್ನು ನಿನ್ನ ಕೈಯಿಂದ ತೆಗೆದು ನಿನ್ನ ದೇವರಾದ ಕರ್ತನ ಬಲಿಪೀಠದ ಮುಂದೆ ಇಡಬೇಕು.

ಧರ್ಮೋಪದೇಶಕಾಂಡ 26 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी