ಅವನು ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಂಡು ಅಲ್ಲಿ ಎಂದೆಂದಿಗೂ ಇರುವದಕ್ಕೆ ನಾನು ಅವನನ್ನು ಆಗ ತಕ್ಕೊಂಡು ಬರುವೆನು ಅಂದಳು.
20ಹನ್ನಳು ಗರ್ಭವತಿ ಯಾಗಿ ಕಾಲವು ಪೂರ್ತಿಯಾದ ತರುವಾಯ ಆದದ್ದೇ ನಂದರೆ, ಅವಳು ಮಗನನ್ನು ಹೆತ್ತು--ನಾನು ಅವನನ್ನು ಕರ್ತನ ಬಳಿಯಲ್ಲಿ ಕೇಳಿಕೊಂಡೆನು ಎಂದು ಹೇಳಿ ಅವನಿಗೆ ಸಮುವೇಲನೆಂದು ಹೆಸರಿಟ್ಟಳು.
21ಆದರೆ ಎಲ್ಕಾನನು ಕರ್ತನಿಗೆ ಪ್ರತಿ ವರುಷದ ಬಲಿಯನ್ನೂ ತನ್ನ ಪ್ರಮಾಣವನ್ನೂ ಸಲ್ಲಿಸುವದಕ್ಕೆ ತನ್ನ ಮನೆಯವರೆಲ್ಲರ ಸಂಗಡ ಹೋಗುವಾಗ ಹನ್ನಳು ಹೋಗದೆ ತನ್ನ ಗಂಡನಿಗೆ--ಮಗುವು ಮೊಲೆ ಬಿಡುವ ವರೆಗೂ ನಾನು ಬರುವದಿಲ್ಲ;
22ಅವನು ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಂಡು ಅಲ್ಲಿ ಎಂದೆಂದಿಗೂ ಇರುವದಕ್ಕೆ ನಾನು ಅವನನ್ನು ಆಗ ತಕ್ಕೊಂಡು ಬರುವೆನು ಅಂದಳು.
23ಅದಕ್ಕೆ ಅವಳ ಗಂಡನಾದ ಎಲ್ಕಾನನು ಅವಳಿಗೆ--ನೀನು ನಿನ್ನ ಕಣ್ಣುಗಳಿಗೆ ಒಳ್ಳೇದಾಗಿ ತೋರುವ ಹಾಗೆ ಮಾಡು. ಅವನು ಮೊಲೆ ಬಿಡುವವರೆಗೂ ಕಾದುಕೊಂಡಿರು. ಕರ್ತನು ತನ್ನ ವಾಕ್ಯವನ್ನು ಸ್ಥಿರಮಾಡಲಿ ಅಂದನು. ಹಾಗೆಯೇ ಅವಳು ಉಳಿದು ತನ್ನ ಮಗುವು ಮೊಲೆ ಬಿಡುವವರೆಗೂ ಅವನಿಗೆ ಮೊಲೆ ಕೊಡುತ್ತಿದ್ದಳು.
24ಅವಳು ಮೊಲೆ ಬಿಡಿಸಿದ ತರುವಾಯ ಅವನನ್ನು ತನ್ನ ಸಂಗಡ ತೆಗೆದುಕೊಂಡು ಮೂರು ಹೋರಿಗಳನ್ನೂ ಒಂದು ಎಫದ ಹಿಟ್ಟನ್ನೂ ಒಂದು ಬುದ್ದಲಿ ದ್ರಾಕ್ಷಾರಸವನ್ನೂ ತೆಗೆದುಕೊಂಡು ಶೀಲೋವಿನಲ್ಲಿರುವ ಕರ್ತನ ಮನೆಗೆ ಹೋದಳು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ