ರೂತಳು 2:17

ಹಾಗೆಯೇ ಅವಳು ಸಾಯಂಕಾಲದ ವರೆಗೂ ಹೊಲದಲ್ಲಿ ಹಕ್ಕಲಾದುಕೊಂಡಳು. ಅವಳು ಹಕ್ಕಲಾದುಕೊಂಡದ್ದನ್ನು ಬಡಿದಾಗ ಅದು ಹೆಚ್ಚು ಕಡಿಮೆ ಒಂದು ಏಫದಷ್ಟು ಜವೆಗೋಧಿಯಾಗಿತ್ತು.

ಸಂದರ್ಭದೊಂದಿಗೆ ಓದಿ · ರೂತಳು 2

15ಅವಳು ಹಕ್ಕಲಾದುಕೊಳ್ಳಲು ಏಳುವಾಗ ಬೋವ ಜನು ತನ್ನ ಯುವಕರಿಗೆ ಆಜ್ಞಾಪಿಸಿ ಇವಳು ಕೊಯಿದ ಸಿವುಡುಗಳ ಮಧ್ಯದಲ್ಲಿ ಹಕ್ಕಲಾದುಕೊಳ್ಳಲಿ. ನೀವು ಅವಳನ್ನು ನಿಂದಿಸಬೇಡಿರಿ;

16ಅವಳು ಹಕ್ಕಲಾದು ಕೊಳ್ಳುವ ಹಾಗೆ ನೀವು ಅವಳಿಗೋಸ್ಕರ ಸಿವುಡು ಗಳಲ್ಲಿ ಕೆಲವು ಜಾರಬಿಡಿರಿ; ಅವಳನ್ನು ಗದರಿಸಬೇಡಿರಿ ಅಂದನು.

17ಹಾಗೆಯೇ ಅವಳು ಸಾಯಂಕಾಲದ ವರೆಗೂ ಹೊಲದಲ್ಲಿ ಹಕ್ಕಲಾದುಕೊಂಡಳು. ಅವಳು ಹಕ್ಕಲಾದುಕೊಂಡದ್ದನ್ನು ಬಡಿದಾಗ ಅದು ಹೆಚ್ಚು ಕಡಿಮೆ ಒಂದು ಏಫದಷ್ಟು ಜವೆಗೋಧಿಯಾಗಿತ್ತು.

18ಅವಳು ಅದನ್ನು ತೆಗೆದುಕೊಂಡು ಪಟ್ಟಣಕ್ಕೆ ಹೋದಳು. ಅವಳು ಹಕ್ತಲಾದುಕೊಂಡದ್ದನ್ನು ಅವಳ ಅತ್ತೆಯು ನೋಡಿದಳು. ರೂತಳು ತೃಪ್ತಿಯಾದ ಮೇಲೆ ಉಳಿಸಿ ತಂದದ್ದನ್ನು ಅವಳಿಗೆ ಕೊಟ್ಟಳು.

19ಆಗ ಅವಳ ಅತ್ತೆಯು ಆಕೆಗೆ ನೀನು ಈ ಹೊತ್ತು ಎಲ್ಲಿ ಹಕ್ಕಲಾದುಕೊಂಡಿ? ಎಲ್ಲಿ ಕೆಲಸ ಮಾಡಿದಿ? ನಿನ್ನನ್ನು ಪರಾಮರಿಸಿದವನು ಆಶೀರ್ವದಿಸಲ್ಪಡಲಿ ಅಂದಳು. ಅದಕ್ಕವಳು ತಾನು ಯಾವನ ಹತ್ತಿರ ಕೆಲಸ ಮಾಡಿ ದಳೋ ಅದನ್ನು ತನ್ನ ಅತ್ತೆಗೆ ತಿಳಿಸಿ ನಾನು ಈ ಹೊತ್ತು ಕೆಲಸಮಾಡಿದವನ ಹೆಸರು ಬೋವಜ ಎಂದು ಹೇಳಿದಳು.

ರೂತಳು 2 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी