ಯೆಶಾಯ 37:28

ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು.

ಸಂದರ್ಭದೊಂದಿಗೆ ಓದಿ · ಯೆಶಾಯ 37

26ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದ್ದನ್ನು ನೀನು ಕೇಳಿಲ್ಲವೋ? ಈಗ ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ನೆರವೇರಿ ಸಿದ್ದೇನೆ. ಆದದರಿಂದಲೇ ಕೋಟೆಗಳುಳ್ಳ ಪಟ್ಟಣ ಗಳನ್ನು ಹಾಳು ದಿಬ್ಬಗಳನ್ನಾಗಿ ಮಾಡುವದು ನಿನಗೆ ಸಾಧ್ಯವಾಯಿತು;

27ಆದದರಿಂದ ಅವುಗಳ ನಿವಾಸಿ ಗಳು ಬಲವಿಲ್ಲದವರಾಗಿ ಆಶಾಭಂಗ ಪಟ್ಟು ಕಳವಳ ಗೊಂಡರು; ಅವರು ಹೊಲದ ಹುಲ್ಲಿನಂತೆಯೂ ಹಸಿರು ಎಲೆಯಂತೆಯೂ ಮಾಳಿಗೆಯ ಮೇಲಿನ ಹುಲ್ಲಿನಂತೆಯೂ ಹೊಡೆಯುವದಕ್ಕಿಂತ ಮೊದಲೇ ಬಾಡಿಹೋಗುವ ಪೈರಿನಂತೆಯೂ ಇದ್ದರು.

28ನೀನು ವಾಸಿಸುವದು ಹೊರಗೆ ಹೋಗುವದು, ಒಳಗೆ ಬರುವದು; ನೀನು ನನ್ನ ಮೇಲೆ ರೌದ್ರಾವೇಶನಾಗಿ ರುವದನ್ನೂ ನಾನು ಬಲ್ಲೆನು.

29ನೀನು ನನಗೆ ವಿರೋಧವಾಗಿ ರೌದ್ರನಾಗಿರುವದೂ ಗೊಂದಲ ದಿಂದಿರುವದೂ ನನ್ನ ಕಿವಿಗೆ ಕೇಳಿಬಂತು. ಆದದರಿಂದ ನಾನು ನಿನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ತುಟಿಗಳಲ್ಲಿಯೂ ಹಾಕಿ, ನೀನು ಬಂದು ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು ಎಂಬದಾಗಿ ಹೇಳಿ ದ್ದಾನೆ.

30ಈ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನು ಎರಡನೇ ವರ್ಷದಲ್ಲಿ ಆದರಿಂದ ಮೊಳೆತದ್ದನ್ನು ತಿನ್ನುವಿರಿ. ಮೂರನೇ ವರ್ಷದಲ್ಲಿ ನೀವು ಬೀಜವನ್ನು ಬಿತ್ತಿ ಕೊಯ್ಯುವಿರಿ; ದ್ರಾಕ್ಷೇ ತೋಟವನ್ನು ನೆಟ್ಟು ಅವುಗಳ ಫಲವನ್ನು ತಿನ್ನುವದೇ ನಿಮಗೆ ಗುರುತಾಗಿ ರುವದು.

ಯೆಶಾಯ 37 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी