ಅಪೊಸ್ತಲರ ಕೃತ್ಯಗಳು 20:7

ವಾರದ ಮೊದಲನೆಯ ದಿವಸದಲ್ಲಿ ಶಿಷ್ಯರು ರೊಟ್ಟಿಮುರಿಯುವದಕ್ಕಾಗಿ ಕೂಡಿ ಬಂದಾಗ ಮರು ದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಪ್ರಸಂಗಿಸುತ್ತಾ ಮಧ್ಯರಾತ್ರಿಯ ವರೆಗೂ ಉಪದೇಶ ವನ್ನು ನಡಿಸಿದನು.

ಸಂದರ್ಭದೊಂದಿಗೆ ಓದಿ · ಅಪೊಸ್ತಲರ ಕೃತ್ಯಗಳು 20

5ಇವರು ಮುಂಚಿತವಾಗಿ ಹೋಗಿ ನಮಗೋಸ್ಕರ ತ್ರೋವದಲ್ಲಿ ಕಾದುಕೊಂಡರು.

6ಹುಳಿಯಿಲ್ಲದ ರೊಟ್ಟಿಯ ದಿವಸ ಗಳಾದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿವಸಗಳಲ್ಲಿ ತ್ರೋವಕ್ಕೆ ಅವರ ಬಳಿಗೆ ಬಂದೆವು. ಅಲ್ಲಿ ಏಳು ದಿವಸಗಳಿದ್ದೆವು.

7ವಾರದ ಮೊದಲನೆಯ ದಿವಸದಲ್ಲಿ ಶಿಷ್ಯರು ರೊಟ್ಟಿಮುರಿಯುವದಕ್ಕಾಗಿ ಕೂಡಿ ಬಂದಾಗ ಮರು ದಿನ ಹೊರಡಬೇಕೆಂದಿದ್ದ ಪೌಲನು ಅವರಿಗೆ ಪ್ರಸಂಗಿಸುತ್ತಾ ಮಧ್ಯರಾತ್ರಿಯ ವರೆಗೂ ಉಪದೇಶ ವನ್ನು ನಡಿಸಿದನು.

8ಅವರು ಕೂಡಿದ್ದ ಮೇಲಂತಸ್ತಿನಲ್ಲಿ ಅನೇಕ ದೀಪಗಳಿದ್ದವು.

9ಆಗ ಕಿಟಕಿಯಲ್ಲಿ ಕೂತು ಕೊಂಡಿದ್ದ ಯೂತಿಕನೆಂಬ ಒಬ್ಬ ಯೌವನಸ್ಥನು ಗಾಢ ನಿದ್ರೆಯಲ್ಲಿದ್ದನು. ಪೌಲನು ಇನ್ನೂ ಪ್ರಸಂಗ ಮಾಡುತ್ತಾ ಇದ್ದಾಗ ಆ ಯೌವನಸ್ಥನಿಗೆ ನಿದ್ರೆಯಿಂದ ತೂಕಡಿಕೆ ಹೆಚ್ಚಾಗಿ ಮೂರನೆಯ ಅಂತಸ್ತಿನಿಂದ ಕೆಳಗೆ ಬಿದ್ದನು; ಅವನನ್ನು ಎತ್ತಿದಾಗ ಅವನು ಸತ್ತಿದ್ದನು.

ಅಪೊಸ್ತಲರ ಕೃತ್ಯಗಳು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी