ಜೆಕರ್ಯ 11:11

ಅದೇ ದಿನದಲ್ಲಿ ಅದು ಮುರಿಯಲ್ಪಟ್ಟಿತು; ಆಗ ನನ್ನಲ್ಲಿ ನಿರೀಕ್ಷೆಯಿಟ್ಟ ಬಡ ಕುರಿಮಂದೆಯು ಅದು ಕರ್ತನ ವಾಕ್ಯವೆಂದು ತಿಳಿದುಕೊಂಡಿತು.

ಸಂದರ್ಭದೊಂದಿಗೆ ಓದಿ · ಜೆಕರ್ಯ 11

9ಆಗ ನಾನು ಹೇಳಿದ್ದೇನಂದರೆ-- ನಾನು ನಿಮ್ಮನ್ನು ಮೇಯಿಸುವದಿಲ್ಲ; ಸಾಯುವಂಥದ್ದು ಸಾಯಲಿ; ಕೆಡುವಂಥದ್ದು ಕೆಡಲಿ; ಮಿಕ್ಕಾದವುಗಳ ಒಂದರ ಮಾಂಸವನ್ನು ಒಂದು ತಿನ್ನಲಿ.

10ಆಗ ಸೌಂದರ್ಯವೆಂಬ ನನ್ನ ಕೋಲನ್ನು ತಕ್ಕೊಂಡು ಅದನ್ನು ಮುರಿದುಬಿಟ್ಟೆನು; ಹೀಗೆ ಜನರೆಲ್ಲರ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ಮುರಿದುಬಿಟ್ಟೆನು,

11ಅದೇ ದಿನದಲ್ಲಿ ಅದು ಮುರಿಯಲ್ಪಟ್ಟಿತು; ಆಗ ನನ್ನಲ್ಲಿ ನಿರೀಕ್ಷೆಯಿಟ್ಟ ಬಡ ಕುರಿಮಂದೆಯು ಅದು ಕರ್ತನ ವಾಕ್ಯವೆಂದು ತಿಳಿದುಕೊಂಡಿತು.

12ಆಗ ನಾನು ಅವರಿಗೆ--ನಿಮ್ಮ ಕಣ್ಣುಗಳಲ್ಲಿ ಒಳ್ಳೇದಾಗಿ ತೋರಿದರೆ ನನ್ನ ಸಂಬಳವನ್ನು ಕೊಡಿರಿ, ಇಲ್ಲದಿದ್ದರೆ ಬಿಡಿರಿ ಅಂದೆನು. ಆಗ ಅವರು ನನ್ನ ಸಂಬಳಕ್ಕಾಗಿ ಮೂವತ್ತು ರೂಪಾಯಿಗಳನ್ನು ತೂಕಮಾಡಿದರು.

13ಆಗ ಕರ್ತನು ನನಗೆ--ಅದನ್ನು ಕುಂಬಾರನಿಗೆ ಹಾಕು; ನಾನು ಅವರಿಂದ ಬೆಲೆ ಮಾಡಲ್ಪಟ್ಟದ್ದು ಸರಿಯಾದ ಬೆಲೆ ಅಲ್ಲವೋ ಅಂದನು; ಆಗ ನಾನು ಆ ಮೂವತ್ತು ರೂಪಾಯಿಗಳನ್ನು ತಕ್ಕೊಂಡು ಕರ್ತನ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಹಾಕಿದೆನು.

ಜೆಕರ್ಯ 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी