ಎಸ್ತೇರಳು 8:7

ಆಗ ಅರಸನಾದ ಅಹಷ್ವೇ ರೋಷನು ರಾಣಿಯಾದ ಎಸ್ತೇರಳಿಗೂ ಯೆಹೂದ್ಯ ನಾದ ಮೊರ್ದೆಕೈಗೂ ಹೇಳಿದ್ದೇನಂದರೆ--ಇಗೋ, ಹಾಮಾನನು ಯೆಹೂದ್ಯರ ಮೇಲೆ ತನ್ನ ಕೈ ಹಾಕಿದ್ದ ರಿಂದ ಅವನ ಮನೆಯನ್ನು ಎಸ್ತೇರಳಿಗೆ ಕೊಟ್ಟೆನು. ಅವನನ್ನು ಗಲ್ಲಿಗೆ ಹಾಕಿದ್ದಾರೆ.

ಸಂದರ್ಭದೊಂದಿಗೆ ಓದಿ · ಎಸ್ತೇರಳು 8

5ಅರಸನಿಗೆ ಒಳ್ಳೇದಾಗಿದ್ದರೆ, ಅವನ ಸಮ್ಮುಖದಲ್ಲಿ ನಾನು ದಯೆಹೊಂದಿದ ವಳಾದರೆ, ಕಾರ್ಯವು ಅರಸನಿಗೆ ಯುಕ್ತವಾಗಿ ಕಾಣಿಸಲ್ಪಟ್ಟರೆ, ನಾನು ಅವನ ಸಮ್ಮುಖದಲ್ಲಿ ಒಳ್ಳೆಯ ವಳೆಂದು ಕಾಣಿಸಲ್ಪಟ್ಟರೆ, ಅರಸನ ಸಮಸ್ತ ಪ್ರಾಂತ್ಯ ಗಳಲ್ಲಿರುವ ಯೆಹೂದ್ಯರನ್ನು ನಾಶಮಾಡುವದಕ್ಕೆ ಅಗಾಗನಾದ ಹಮ್ಮೆದಾತನ ಮಗನಾದ ಹಾಮಾನನು ಯೋಚಿಸಿ ಬರೆದ ಪತ್ರಗಳು ರದ್ದುಮಾಡಲ್ಪಡುವಂತೆ ಬರೆಯಲ್ಪಡಲಿ.

6ಯಾಕಂದರೆ ನನ್ನ ಜನರ ಮೇಲೆ ಬರುವ ಕೆಡನ್ನು ನಾನು ನೋಡಿ ಹೇಗೆ ಸಹಿಸಲಿ? ಇಲ್ಲವೆ ನನ್ನ ಬಂಧುಗಳ ನಾಶನವನ್ನು ನಾನು ನೋಡಿ ಹೇಗೆ ಸಹಿಸಲಿ ಅಂದಳು.

7ಆಗ ಅರಸನಾದ ಅಹಷ್ವೇ ರೋಷನು ರಾಣಿಯಾದ ಎಸ್ತೇರಳಿಗೂ ಯೆಹೂದ್ಯ ನಾದ ಮೊರ್ದೆಕೈಗೂ ಹೇಳಿದ್ದೇನಂದರೆ--ಇಗೋ, ಹಾಮಾನನು ಯೆಹೂದ್ಯರ ಮೇಲೆ ತನ್ನ ಕೈ ಹಾಕಿದ್ದ ರಿಂದ ಅವನ ಮನೆಯನ್ನು ಎಸ್ತೇರಳಿಗೆ ಕೊಟ್ಟೆನು. ಅವನನ್ನು ಗಲ್ಲಿಗೆ ಹಾಕಿದ್ದಾರೆ.

8ನೀವು ಯೆಹೂದ್ಯರಿ ಗೋಸ್ಕರ ಅರಸನ ಹೆಸರಿನಿಂದ ನಿಮ್ಮ ದೃಷ್ಟಿಗೆ ಒಳ್ಳೇ ದಾಗಿ ತೋರುವ ಹಾಗೆ ಬರೆದು ಅರಸನ ಉಂಗುರ ದಿಂದ ಮುದ್ರೆಯನ್ನು ಹಾಕಿರಿ. ಯಾಕಂದರೆ ಅರಸನ ಹೆಸರಿನಿಂದ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟ ಬರಹವನ್ನು ಯಾರೂ ಈಗ ರದ್ದು ಮಾಡುವದಕ್ಕಾಗುವದಿಲ್ಲ ಅಂದನು.

9ಆಗ ಅದೇ ಕಾಲದಲ್ಲಿ ಶೀವಾನ್‌ ಎಂಬುವ ಮೂರನೇ ತಿಂಗಳ ಇಪ್ಪತ್ತು ಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಮೊರ್ದೆಕೈ ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಸಕಲ ಯೆಹೂದ್ಯರಿಗೂ ಭಾರತ ಮೊದಲು ಗೊಂಡು ಕೂಷಿನ ವರೆಗೂ ಇರುವ ನೂರಇಪ್ಪತ್ತೇಳು ಪ್ರಾಂತ್ಯಗಳ ಯಜಮಾನರಿಗೂ ಅಧಿಪತಿಗಳಿಗೂ ಪ್ರಧಾನರಿಗೂ ಪ್ರತಿ ಪ್ರಾಂತ್ಯಕ್ಕೆ ಅದರ ಬರಹದ ಪ್ರಕಾರವೂ ಪ್ರತಿ ಜನರಿಗೆ ಅವರ ಭಾಷೆಯ ಪ್ರಕಾ ರವೂ ಯೆಹೂದ್ಯರಿಗೆ ಅವರ ಬರಹದ ಪ್ರಕಾರವೂ ಅವರ ಭಾಷೆಯ ಪ್ರಕಾರವೂ ಬರೆಯಲ್ಪಟ್ಟಿತು.

ಎಸ್ತೇರಳು 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी