ಯೆರೆಮಿಯ 12:8

ನನ್ನ ಸ್ವಾಸ್ತ್ಯವು ನನಗೆ ಅಡವಿಯಲ್ಲಿರುವ ಸಿಂಹದ ಹಾಗಾಯಿತು, ಅದು ನನಗೆ ವಿರೋಧವಾಗಿ ಕೂಗುತ್ತದೆ. ಆದದರಿಂದ ಅದನ್ನು ಹಗೆಮಾಡಿದ್ದೇನೆ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 12

6ನಿನ್ನ ಸಹೋದರರೂ ನಿನ್ನ ತಂದೆಯ ಮನೆತನದವರೂ ಇವರೇ ನಿನಗೆ ವಂಚನೆ ಮಾಡಿದ್ದಾರೆ; ಹೌದು, ಇವರೇ ನಿನ್ನ ಹಿಂದೆ ಸಮೂಹವನ್ನು ಕರೆದಿದ್ದಾರೆ, ಅವರು ನಿನಗೆ ಒಳ್ಳೇ ಮಾತುಗಳನ್ನು ಹೇಳಿದರೂ ಅವರನ್ನು ನಂಬಬೇಡ.

7ನನ್ನ ಮನೆಯನ್ನು ಬಿಟ್ಟಿದ್ದೇನೆ, ಸ್ವಾಸ್ತ್ಯವನ್ನು ತ್ಯಜಿಸಿದ್ದೇನೆ; ನನ್ನ ಪ್ರಾಣಕ್ಕೆ ಅತಿ ಪ್ರಿಯವಾದವಳನ್ನು ಅವಳ ಶತ್ರುಗಳ ಕೈಯಲ್ಲಿ ಒಪ್ಪಿಸಿದ್ದೇನೆ.

8ನನ್ನ ಸ್ವಾಸ್ತ್ಯವು ನನಗೆ ಅಡವಿಯಲ್ಲಿರುವ ಸಿಂಹದ ಹಾಗಾಯಿತು, ಅದು ನನಗೆ ವಿರೋಧವಾಗಿ ಕೂಗುತ್ತದೆ. ಆದದರಿಂದ ಅದನ್ನು ಹಗೆಮಾಡಿದ್ದೇನೆ.

9ನನ್ನ ಸ್ವಾಸ್ತ್ಯವು ನನಗೆ ಚಿತ್ರ ವರ್ಣದ ಪಕ್ಷಿಯಾಯಿತು. ಸುತ್ತಲಾಗಿ ಪಕ್ಷಿಗಳು ಅದಕ್ಕೆ ವಿರೋಧವಾಗಿವೆ; ಬನ್ನಿ, ಹೊಲದ ಮೃಗಗಳ ನ್ನೆಲ್ಲಾ ಕೂಡಿಸಿರಿ, ತಿನ್ನುವದಕ್ಕೆ ಅವುಗಳನ್ನು ತನ್ನಿರಿ;

10ಅನೇಕ ಕುರುಬರು ನನ್ನ ದ್ರಾಕ್ಷೇ ತೋಟವನ್ನು ಕೆಡಿಸಿದ್ದಾರೆ, ನನ್ನ ಭಾಗವನ್ನು ತುಳಿದುಬಿಟ್ಟಿದ್ದಾರೆ, ನಾನು ಮೆಚ್ಚಿದ ಭಾಗವನ್ನು ಹಾಳಾದ ಅರಣ್ಯವಾಗ ಮಾಡಿದ್ದಾರೆ.

ಯೆರೆಮಿಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी