ನ್ಯಾಯಸ್ಥಾಪಕರು 3:18

ಅವನು ಕಾಣಿಕೆಯನ್ನು ಕೊಟ್ಟು ತೀರಿಸಿದಾಗ ಕಾಣಿಕೆಯನ್ನು ಹೊತ್ತುಕೊಂಡು ಬಂದ ಜನರನ್ನು ಕಳುಹಿಸಿ ಬಿಟ್ಟು

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 3

16ಏಹೂದನು ಇಬ್ಬಾಯಿಯ ಒಂದು ಮೊಳ ಉದ್ದವಾದ ಒಂದು ಕಠಾರಿಯನ್ನು ತನಗೆ ಮಾಡಿ ಕೊಂಡು ಅದನ್ನು ತನ್ನ ವಸ್ತ್ರದ ಕೆಳಗೆ ತನ್ನ ಬಲಗಡೆ ತೊಡೆಯಲ್ಲಿ ಕಟ್ಟಿಕೊಂಡು

17ಕಾಣಿಕೆಯನ್ನು ಮೋವಾ ಬಿನ ಅರಸನಾದ ಎಗ್ಲೋನನ ಬಳಿಗೆ ತಂದನು. ಎಗ್ಲೋನನು ಬಹು ಕೊಬ್ಬಿದವನಾಗಿದ್ದನು.

18ಅವನು ಕಾಣಿಕೆಯನ್ನು ಕೊಟ್ಟು ತೀರಿಸಿದಾಗ ಕಾಣಿಕೆಯನ್ನು ಹೊತ್ತುಕೊಂಡು ಬಂದ ಜನರನ್ನು ಕಳುಹಿಸಿ ಬಿಟ್ಟು

19ತಾನು ಗಿಲ್ಗಾಲಿನಲ್ಲಿರುವ ಕಲ್ಲುಗುಣಿಯ ಸ್ಥಳದಿಂದ ಹಿಂದಕ್ಕೆ ತಿರುಗಿ ಅವನ ಬಳಿಗೆ ಬಂದು--ಓ ಅರಸೇ, ನಿನಗೆ ಹೇಳತಕ್ಕ ರಹಸ್ಯವಾದ ಒಂದು ಮಾತು ಅದೆ ಅಂದನು. ಅವನು--ಸುಮ್ಮನಿರ್ರಿ ಎಂದು ಹೇಳಿದಾಗ ಅವನ ಬಳಿಯಲ್ಲಿ ನಿಂತವರೆಲ್ಲರು ಅವನನ್ನು ಬಿಟ್ಟು ಹೊರಗೆಹೋದರು.

20ಅವನು ತನಗೋಸ್ಕರ ಮಾತ್ರ ಇದ್ದ ಬೇಸಿಗೆಯ ಕೊಠಡಿಯಲ್ಲಿ ಕುಳಿತಾಗ ಏಹೂದನು ಅವನ ಬಳಿಗೆ ಪ್ರವೇಶಿಸಿ--ನಿನ್ನ ಸಂಗಡ ಹೇಳಬೇಕಾದ ದೇವರ ಸಂದೇಶ ನನಗದೆ ಅಂದನು. ಅವನು ತನ್ನ ಗದ್ದುಗೆಯಿಂದ ಎದ್ದನು.

ನ್ಯಾಯಸ್ಥಾಪಕರು 3 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी