೧ ಸಮುವೇಲನು 18:5

ಸೌಲನು ದಾವೀದನನ್ನು ಎಲ್ಲಿಗೆ ಕಳುಹಿಸಿದರೂ ಅಲ್ಲಿಗೆ ಹೋಗಿ ಅವನು ಬುದ್ಧಿ ಯಿಂದ ಕಾರ್ಯವನ್ನು ನಡಿಸುತ್ತಿದ್ದನು. ಆದದರಿಂದ ಸೌಲನು ಅವನನ್ನು ಯುದ್ಧಸ್ಥರ ಮೇಲೆ ಅಧಿಕಾರಿಯಾಗ ಮಾಡಿದನು. ಅವನು ಸಮಸ್ತ ಜನರ ದೃಷ್ಟಿಯಲ್ಲಿಯೂ ಸೌಲನ ಎಲ್ಲಾ ಸೇವಕರ ದೃಷ್ಟಿಯಲ್ಲಿಯೂ ಒಪ್ಪಿಗೆಯಾಗಿದ್ದನು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 18

3ಯೋನಾತಾನನು ತನ್ನ ಪ್ರಾಣದ ಹಾಗೆ ದಾವೀದ ನನ್ನು ಪ್ರೀತಿಮಾಡಿದ್ದರಿಂದ ಒಬ್ಬರಿಗೊಬ್ಬರು ಒಡಂಬಡಿ ಕೆಯನ್ನು ಮಾಡಿಕೊಂಡರು.

4ಆಗ ಯೋನಾತಾನನು ತೊಟ್ಟುಕೊಂಡಿದ್ದ ನಿಲುವಂಗಿಯನ್ನು ತೆಗೆದು ಅದನ್ನೂ ತನ್ನ ವಸ್ತ್ರಗಳನ್ನೂ ಕತ್ತಿಯನ್ನೂ ಬಿಲ್ಲನ್ನೂ ನಡುಕಟ್ಟನ್ನೂ ದಾವೀದನಿಗೆ ಕೊಟ್ಟನು.

5ಸೌಲನು ದಾವೀದನನ್ನು ಎಲ್ಲಿಗೆ ಕಳುಹಿಸಿದರೂ ಅಲ್ಲಿಗೆ ಹೋಗಿ ಅವನು ಬುದ್ಧಿ ಯಿಂದ ಕಾರ್ಯವನ್ನು ನಡಿಸುತ್ತಿದ್ದನು. ಆದದರಿಂದ ಸೌಲನು ಅವನನ್ನು ಯುದ್ಧಸ್ಥರ ಮೇಲೆ ಅಧಿಕಾರಿಯಾಗ ಮಾಡಿದನು. ಅವನು ಸಮಸ್ತ ಜನರ ದೃಷ್ಟಿಯಲ್ಲಿಯೂ ಸೌಲನ ಎಲ್ಲಾ ಸೇವಕರ ದೃಷ್ಟಿಯಲ್ಲಿಯೂ ಒಪ್ಪಿಗೆಯಾಗಿದ್ದನು.

6ಆದರೆ ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ ಜನರ ಸಹಿತವಾಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರು ಸಂತೋಷದಿಂದ ಹೊರಟು ದಮ್ಮಡಿಗಳಿಂದಲೂ ಸಂಗೀತವಾದ್ಯಗಳಿಂದಲೂ ಹಾಡುತ್ತಾ ನಾಟ್ಯವಾಡುತ್ತಾ ಅರಸನಾದ ಸೌಲನನ್ನು ಎದುರುಗೊಳ್ಳಲು ಬಂದರು.

7ಆ ಸ್ತ್ರೀಯರು ಹಾಡುತ್ತಾ ಒಬ್ಬರಿಗೊಬ್ಬರು--ಸೌಲನು ಸಾವಿರಗಳನ್ನೂ ದಾವೀ ದನು ಹತ್ತು ಸಾವಿರಗಳನ್ನೂ ಕೊಂದನೆಂದು ಪ್ರತ್ಯುತ್ತರ ಕೊಟ್ಟರು.

೧ ಸಮುವೇಲನು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी