೧ ಅರಸುಗಳು 14:5

ಆದರೆ ಕರ್ತನು ಅಹೀಯನಿಗೆಇಗೋ, ಯಾರೊಬ್ಬಾಮನ ಪತ್ನಿಯು ತನ್ನ ಮಗನಿ ಗೋಸ್ಕರ ನಿನ್ನನ್ನು ವಿಚಾರಿಸುವುದಕ್ಕಾಗಿ ಬರುತ್ತಾಳೆ. ಯಾಕಂದರೆ ಅವನು ರೋಗದಲ್ಲಿದ್ದಾನೆ. ನೀನು ಅವ ಳಿಗೆ ಹೀಗೆ ಹೇಳು, ಅವಳು ಒಳಗೆ ಬರುವಾಗ ಮತ್ತೊ ಬ್ಬಳ ಹಾಗೆ ವೇಷ ಹಾಕಿಕೊಂಡು ಬರುವಳು ಅಂದನು.

ಸಂದರ್ಭದೊಂದಿಗೆ ಓದಿ · ೧ ಅರಸುಗಳು 14

3ಇದಲ್ಲದೆ ನೀನು ನಿನ್ನ ಕೈಯಲ್ಲಿ ಹತ್ತು ರೊಟ್ಟಿಗಳನ್ನೂ ಭಕ್ಷ್ಯಗಳನ್ನೂ ಒಂದು ಮಡಕೆ ಜೇನು ತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಅವನು ಮಗುವಿಗೆ ಆಗುವದನ್ನು ನಿನಗೆ ತಿಳಿಸುವನು ಅಂದನು.

4ಯಾರೊಬ್ಬಾಮನ ಪತ್ನಿಯು ಎದ್ದು ಹಾಗೆಯೇ ಮಾಡಿ ಶೀಲೋವಿಗೆ ಹೋಗಿ ಅಹೀಯನ ಮನೆಗೆ ಬಂದಳು. ಆದರೆ ಅಹೀಯನು ನೋಡಲಾರದೆ ಇದ್ದನು; ಯಾಕಂದರೆ ವೃದ್ಧಾಪ್ಯದಿಂದ ಅವನ ಕಣ್ಣುಗಳು ಮೊಬ್ಬಾಗಿದ್ದವು.

5ಆದರೆ ಕರ್ತನು ಅಹೀಯನಿಗೆಇಗೋ, ಯಾರೊಬ್ಬಾಮನ ಪತ್ನಿಯು ತನ್ನ ಮಗನಿ ಗೋಸ್ಕರ ನಿನ್ನನ್ನು ವಿಚಾರಿಸುವುದಕ್ಕಾಗಿ ಬರುತ್ತಾಳೆ. ಯಾಕಂದರೆ ಅವನು ರೋಗದಲ್ಲಿದ್ದಾನೆ. ನೀನು ಅವ ಳಿಗೆ ಹೀಗೆ ಹೇಳು, ಅವಳು ಒಳಗೆ ಬರುವಾಗ ಮತ್ತೊ ಬ್ಬಳ ಹಾಗೆ ವೇಷ ಹಾಕಿಕೊಂಡು ಬರುವಳು ಅಂದನು.

6ಅವಳು ಬಾಗಲಲ್ಲಿ ಪ್ರವೇಶಿಸುವಾಗ ಅಹೀಯನು ಅವಳ ಪಾದಗಳ ಶಬ್ದವನ್ನು ಕೇಳುತ್ತಲೇ--ಯಾರೊ ಬ್ಬಾಮನ ಪತ್ನಿಯೇ ಒಳಗೆ ಬಾ; ನೀನು ಮತ್ತೊಬ್ಬಳೆಂದು ತೋರಮಾಡುವದು ಯಾಕೆ? ಕಠಿಣವಾದ ಮಾತು ಗಳನ್ನು ತಿಳಿಸಲು ನನಗೆ ಅಪ್ಪಣೆಯಾಗಿದೆ.

7ನೀನು ಹೋಗಿ ಯಾರೊಬ್ಬಾಮನಿಗೆ ಹೇಳಬೇಕಾದದ್ದು-- ಇಸ್ರಾಯೇಲಿನ ದೇವರಾದ ಕರ್ತನು ಹೇಳುವದೇ ನಂದರೆ--ನಾನು ಜನರೊಳಗಿಂದ ಎತ್ತಿ, ನಿನ್ನನ್ನು ಹೆಚ್ಚಿಸಿ ನನ್ನ ಜನರಾದ ಇಸ್ರಾಯೇಲ್ಯರ ಮೇಲೆ ನಾಯಕನಾಗ ಮಾಡಿ ದಾವೀದನ ಮನೆಯಿಂದ ರಾಜ್ಯವನ್ನು ಕಿತ್ತು ಕೊಂಡು ನಿನಗೆ ಕೊಟ್ಟೆನು.

೧ ಅರಸುಗಳು 14 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी