ಆಗ ಅಪೋಸ್ತಲರು ಕರ್ತನಿಗೆ--ನಮ್ಮ ನಂಬಿಕೆ ಯನ್ನು ಹೆಚ್ಚಿಸು ಅಂದರು.
3ನೀವು ನಿಮ್ಮ ವಿಷಯದಲ್ಲಿ ಎಚ್ಚರಿಕೆಯನ್ನು ತೆಗೆದುಕೊಳ್ಳಿರಿ; ನಿನ ಸಹೋದರನು ನಿನಗೆ ವಿರೋಧವಾಗಿ ತಪ್ಪು ಮಾಡಿದರೆ ಅವನನ್ನು ಗದರಿಸು; ಅವನು ಮಾನಸಾಂತರಪಟ್ಟರೆ ಅವನನ್ನು ಕ್ಷಮಿಸು.
4ಅವನು ಒಂದು ದಿನದಲ್ಲಿ ಏಳು ಸಾರಿ ನಿನಗೆ ವಿರೋಧವಾಗಿ ತಪ್ಪು ಮಾಡಿ ಅದೇ ದಿನದಲ್ಲಿ ಏಳು ಸಾರಿ ನಿನ್ನ ಕಡೆಗೆ ತಿರುಗಿಕೊಂಡು-- ನಾನು ಮಾನಸಾಂತರಪಡುತ್ತೇನೆ ಎಂದು ಹೇಳಿದರೆ ನೀನು ಅವನನ್ನು ಕ್ಷಮಿಸಬೇಕು ಅಂದನು.
5ಆಗ ಅಪೋಸ್ತಲರು ಕರ್ತನಿಗೆ--ನಮ್ಮ ನಂಬಿಕೆ ಯನ್ನು ಹೆಚ್ಚಿಸು ಅಂದರು.
6ಕರ್ತನು ಅವರಿಗೆ-- ನಿಮಗೆ ಸಾಸಿವೆ ಕಾಳಿನಷ್ಟು ನಂಬಿಕೆ ಇರುವದಾದರೆ ನೀವು ಈ ಆಲದ ಮರಕ್ಕೆ--ನೀನು ಬೇರು ಸಹಿತ ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ನಾಟಿಕೋ ಎಂದು ಹೇಳುವದಾದರೆ ಅದು ನಿಮಗೆ ವಿಧೇಯ ವಾಗುವದು.
7ಆದರೆ ನಿಮ್ಮಲ್ಲಿ ಒಬ್ಬನಿಗೆ ಉಳುವ ಇಲ್ಲವೆ ದನಕರು ಕಾಯುವ ಆಳಿರಲಾಗಿ ಅವನು ಹೊಲದಿಂದ ಬಂದಾ ಗಲೇ ಅವನಿಗೆ--ಹೋಗಿ ಊಟಕ್ಕೆ ಕೂತುಕೋ ಎಂದು ಹೇಳುವದುಂಟೇ?
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ