ಯೆರೆಮಿಯ 24:1

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾ ಕೀಮನ ಮಗನಾದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಬಡಗಿಯವರನ್ನೂ ಕಮ್ಮಾರರನೂ ಯೆರೂಸಲೇಮಿನಿಂದ ಸೆರೆಗೆ ಒಯ್ದು ಬಾಬೆಲಿಗೆ ತಕ್ಕೊಂಡುಹೋದ ಮೇಲೆ ಕರ್ತನು ನನಗೆ ತೋರಿಸ ಲಾಗಿ, ಅಗೋ, ಎರಡು ಪುಟ್ಟಿ ಅಂಜೂರದ ಹಣ್ಣುಗಳು ಕರ್ತನ ದೇವಾಲಯದ ಮುಂದೆ ಇದ್ದವು.

ಸಂದರ್ಭದೊಂದಿಗೆ ಓದಿ · ಯೆರೆಮಿಯ 24

1ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂದದ ಅರಸನಾದ ಯೆಹೋಯಾ ಕೀಮನ ಮಗನಾದ ಯೆಕೊನ್ಯನನ್ನೂ ಯೆಹೂದದ ಪ್ರಧಾನರನ್ನೂ ಬಡಗಿಯವರನ್ನೂ ಕಮ್ಮಾರರನೂ ಯೆರೂಸಲೇಮಿನಿಂದ ಸೆರೆಗೆ ಒಯ್ದು ಬಾಬೆಲಿಗೆ ತಕ್ಕೊಂಡುಹೋದ ಮೇಲೆ ಕರ್ತನು ನನಗೆ ತೋರಿಸ ಲಾಗಿ, ಅಗೋ, ಎರಡು ಪುಟ್ಟಿ ಅಂಜೂರದ ಹಣ್ಣುಗಳು ಕರ್ತನ ದೇವಾಲಯದ ಮುಂದೆ ಇದ್ದವು.

2ಒಂದು ಪುಟ್ಟಿಯಲ್ಲಿ ಬಹಳ ಒಳ್ಳೇ ಹಣ್ಣುಗಳು ಮೊದಲು ಮಾಗುವ ಹಣ್ಣುಗಳ ಹಾಗೆ ಇರುವವುಗಳೂ ಮತ್ತೊಂದು ಪುಟ್ಟಿಯಲ್ಲಿ ಬಹಳ ಕೆಟ್ಟ ಹಣ್ಣುಗಳು, ತಿನ್ನಕೂಡದ ಹಾಗೆ ಅಷ್ಟು ಕೆಟ್ಟವುಗಳೂ ಇದ್ದವು.

3ಆಗ ಕರ್ತನು ನನಗೆ--ಯೆರೆವಿಾಯನೇ, ಏನು ನೋಡುತ್ತೀ ಅಂದನು. ಆಗ ನಾನು ಅಂಜೂರದ ಹಣ್ಣುಗಳನ್ನು ನೋಡುತ್ತೇನೆ; ಒಳ್ಳೇ ಹಣ್ಣುಗಳು ಬಹಳ ಒಳ್ಳೇವು; ಕೆಟ್ಟ ಹಣ್ಣುಗಳು ಬಹಳ ಕೆಟ್ಟವುಗಳು, ತಿನ್ನ ಕೂಡದ ಹಾಗೆ ಅಷ್ಟು ಕೆಟ್ಟವಾಗಿವೆ ಅಂದೆನು.

ಯೆರೆಮಿಯ 24 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी