೨ ಪೂರ್ವಕಾಲವೃತ್ತಾಂತ 27:7

ಯೋತಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಯುದ್ಧಗಳೂ ಅವನ ಮಾರ್ಗಗಳೂ ಇಗೋ, ಅವು ಇಸ್ರಾಯೇಲ್‌ ಯೆಹೂದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

ಸಂದರ್ಭದೊಂದಿಗೆ ಓದಿ · ೨ ಪೂರ್ವಕಾಲವೃತ್ತಾಂತ 27

5ಇವನು ಅಮ್ಮೋನಿಯರ ಅರಸನ ಸಂಗಡ ಯುದ್ಧಮಾಡಿ ಅವ ನನ್ನು ಜಯಿಸಿದನು. ಆದ್ದರಿಂದ ಅಮ್ಮೋನನ ಮಕ್ಕಳು ಅದೇ ವರುಷದಲ್ಲಿ ನೂರು ಬೆಳ್ಳಿ ತಲಾಂತುಗಳನ್ನೂ ಹತ್ತುಸಾವಿರ ಅಳತೆಯ ಗೋಧಿಯನ್ನೂ ಹತ್ತು ಸಾವಿರ ಕೋರ್‌ ಜವೆ ಗೋಧಿಯನ್ನೂ ಅವನಿಗೆ ಕೊಟ್ಟರು. ಅಮ್ಮೋನನ ಮಕ್ಕಳು ಎರಡನೇ ವರುಷದಲ್ಲಿಯೂ ಮೂರನೇ ವರುಷದಲ್ಲಿಯೂ ಅದೇ ಪ್ರಕಾರ ಅವನಿಗೆ ಕೊಟ್ಟರು.

6ಹೀಗೆಯೇ ಯೋತಾಮನು ತನ್ನ ದೇವ ರಾದ ಕರ್ತನ ಮುಂದೆ ತನ್ನ ಮಾರ್ಗಗಳನ್ನು ಸರಿಪಡಿಸಿ ದ್ದರಿಂದ ಇವನು ಬಲಗೊಂಡನು.

7ಯೋತಾಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಯುದ್ಧಗಳೂ ಅವನ ಮಾರ್ಗಗಳೂ ಇಗೋ, ಅವು ಇಸ್ರಾಯೇಲ್‌ ಯೆಹೂದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ.

8ಇವನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷ ದವನಾಗಿದ್ದು ಯೆರೂಸಲೇಮಿನಲ್ಲಿ ಹದಿನಾರು ವರುಷ ಆಳಿದನು.

9ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾ ಜನು ಅವನಿಗೆ ಬದಲಾಗಿ ಆಳಿದನು.

೨ ಪೂರ್ವಕಾಲವೃತ್ತಾಂತ 27 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी