ಯೆಹೆಜ್ಕೇಲನು 41:3

ಆಮೇಲೆ ಅವನು ಒಳಗೆ ಹೋಗಿ ಬಾಗಿಲಿನ ಕಂಬವನ್ನು ಎರಡು ಮೊಳವೆಂದೂ ಬಾಗಿಲನ್ನು ಆರು ಮೊಳವೆಂದೂ ಬಾಗಿಲಿನ ಅಗಲ ಏಳು ಮೊಳವೆಂದೂ ಅಳೆದನು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 41

1ಆಮೇಲೆ, ಅವನು ನನ್ನನು ದೇವಾಲಯಕ್ಕೆ ಕರೆತಂದು ಕಂಬಗಳನ್ನೂ ಒಂದು ಕಡೆಯಲ್ಲಿ ಆರು ಮೊಳ ಅಗಲವೆಂದೂ ಮತ್ತೊಂದು ಕಡೆ ಆರು ಮೊಳ ಅಗಲವೆಂದೂ ಅಳೆದನು. ಇದೇ ಆ ಗುಡಾರದ ಅಡ್ಡಗಲವಾಗಿತ್ತು.

2ಬಾಗಲಿನ ಅಗಲವು ಹತ್ತು ಮೊಳ ಬಾಗಲಿನ ಪಾರ್ಶ್ವಗಳು ಒಂದು ಕಡೆಯಲ್ಲಿ ಐದು ಮೊಳ, ಇನ್ನೊಂದು ಕಡೆಯಲ್ಲಿ ಐದು ಮೊಳವೆಂದು ಅವನು ಅದರ ಉದ್ದವನ್ನು ನಲವತ್ತು ಮೊಳವೆಂದೂ ಅಗಲವನ್ನು ಇಪ್ಪತ್ತು ಮೊಳವೆಂದೂ ಅಳೆದನು.

3ಆಮೇಲೆ ಅವನು ಒಳಗೆ ಹೋಗಿ ಬಾಗಿಲಿನ ಕಂಬವನ್ನು ಎರಡು ಮೊಳವೆಂದೂ ಬಾಗಿಲನ್ನು ಆರು ಮೊಳವೆಂದೂ ಬಾಗಿಲಿನ ಅಗಲ ಏಳು ಮೊಳವೆಂದೂ ಅಳೆದನು.

4ಹೀಗೆ ಅವನು ಅದರ ಉದ್ದ ಇಪ್ಪತ್ತು ಮೊಳವೆಂದೂ ಅಗಲ ಇಪ್ಪತ್ತು ಮೊಳವೆಂದೂ ದೇವಾ ಲಯದ ಮುಂದೆ ಅಳೆದನು; ಇದೇ ಮಹಾಪರಿಶುದ್ಧ ಸ್ಥಳ ಎಂದು ಅವನು ನನಗೆ ಹೇಳಿದನು.

5ಅನಂತರ ಅವನು ಆಲಯದ ಗೋಡೆಯನ್ನು ಆರು ಮೊಳವೆಂದೂ ಮನೆಯ ಸುತ್ತಲೂ ಎಲ್ಲಾ ಕಡೆಗಳಲ್ಲೂ ಇದ್ದ ಪಾರ್ಶ್ವದ ಕೊಠಡಿಗಳ ಅಗಲ ನಾಲ್ಕು ಮೊಳವೆಂದೂ ಅಳೆದನು.

ಯೆಹೆಜ್ಕೇಲನು 41 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी