ಯಾಜಕಕಾಂಡ 25:13

ಸಂಭ್ರಮದ ಈ ವರುಷದಲ್ಲಿ ಪ್ರತಿಯೊಬ್ಬನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 25

11ಐವತ್ತನೆಯ ಆ ವರುಷವು ನಿಮಗೆ ಸಂಭ್ರಮವಾಗಿ ರುವದು; ನೀವು ಬಿತ್ತಲೂಬಾರದು ಮತ್ತು ತನ್ನಷ್ಟಕ್ಕೆ ತಾನೇ ಬೆಳೆಯುವದನ್ನು ಕೊಯ್ಯಲೂಬಾರದು ಇಲ್ಲವೆ ಕತ್ತರಿಸದಿದ್ದ ದ್ರಾಕ್ಷೇ ಬಳ್ಳಿಗಳಲ್ಲಿ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಲೂಬಾರದು.

12ಅದು ಸಂಭ್ರಮವೇ; ಅದು ನಿಮಗೆ ಪರಿಶುದ್ಧವಾಗಿರುವದು; ಹೊಲದೊಳಗಿಂದ ಅದರ ಹುಟ್ಟುವಳಿಯನ್ನು ನೀವು ತಿನ್ನಬೇಕು.

13ಸಂಭ್ರಮದ ಈ ವರುಷದಲ್ಲಿ ಪ್ರತಿಯೊಬ್ಬನು ತನ್ನ ಸ್ವಾಸ್ತ್ಯಕ್ಕೆ ಹಿಂದಿರುಗಬೇಕು.

14ನೆರೆಯವನಿಗೆ ಏನಾದರೂ ಮಾರಾಟಮಾಡಿದ್ದರೆ ಇಲ್ಲವೆ ನೆರೆಯವ ನಿಂದ ಕೊಂಡು ಕೊಂಡಿದ್ದರೆ ಒಬ್ಬರಿಗೊಬ್ಬರು ಉಪದ್ರ ಪಡಿಸಿಕೊಳ್ಳಬಾರದು.

15ಸಂಭ್ರಮದ ತರುವಾಯ ವರುಷಗಳ ಲೆಕ್ಕದ ಪ್ರಕಾರ ನಿನ್ನ ನೆರೆಯವನಿಂದ ಕೊಂಡುಕೊಳ್ಳಬೇಕು. ಫಲದ ವರುಷಗಳ ಪ್ರಕಾರ ಅವನು ನಿನಗೆ ಮಾರಾಟಮಾಡಬೇಕು.

ಯಾಜಕಕಾಂಡ 25 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी