ಆದರೆ ಅವರೂ ನಮ್ಮ ತಂದೆಗಳೂ ಗರ್ವಪಟ್ಟು ನಡೆದು ತಮ್ಮ ಕುತ್ತಿಗೆಯನ್ನು ಕಠಿಣಮಾಡಿ ನಿನ್ನ ಆಜ್ಞೆ ಗಳನ್ನು ಕೇಳದೆ ಹೋದರು.
14ನೀನು ಪರಿಶುದ್ಧ ಸಬ್ಬತ್ ದಿವಸವನ್ನು ಅವರಿಗೆ ತಿಳಿಸಿ ನಿನ್ನ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ ಕಟ್ಟಳೆಗಳನ್ನೂ ನ್ಯಾಯಪ್ರಮಾಣವನ್ನೂ
15ಅವರ ಹಸಿವೆಗೋಸ್ಕರ ಆಕಾಶದಿಂದ ರೊಟ್ಟಿಯನ್ನೂ ಕೊಟ್ಟಿ; ಅವರ ದಾಹಕ್ಕೋಸ್ಕರ ಬಂಡೆಯಿಂದ ನೀರನ್ನು ಬರಮಾಡಿ ನೀನು ಅವರಿಗೆ ಕೊಡಲು ಪ್ರಮಾಣ ಮಾಡಿದ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಹಾಗೆ ಅವರಿಗೆ ವಾಗ್ದಾನಮಾಡಿದಿ.
16ಆದರೆ ಅವರೂ ನಮ್ಮ ತಂದೆಗಳೂ ಗರ್ವಪಟ್ಟು ನಡೆದು ತಮ್ಮ ಕುತ್ತಿಗೆಯನ್ನು ಕಠಿಣಮಾಡಿ ನಿನ್ನ ಆಜ್ಞೆ ಗಳನ್ನು ಕೇಳದೆ ಹೋದರು.
17ಕೇಳದೆಯೂ ನೀನು ಅವರ ಮಧ್ಯದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಕ ಮಾಡದೆಯೂ ತಮ್ಮ ಕುತ್ತಿಗೆಯನ್ನು ಕಠಿಣ ಮಾಡಿ ಎದುರುಬಿದ್ದು ತಮ್ಮ ದಾಸತ್ವಕ್ಕೆ ತಿರಿಗಿ ಹೋಗುವ ಹಾಗೆ ಅಧಿಪತಿಯನ್ನು ನೇಮಿಸಿದರು. ಆದರೆ ನೀನು ಮನ್ನಿಸುವ ದೇವರಾಗಿಯೂ ಕೃಪಾಪೂರ್ಣನೂ ಅಂತಃ ಕರಣವೂ ದೀರ್ಘಶಾಂತಿಯೂ ಮಹಾದಯೆಯೂ ಆಗಿರುವವನಾಗಿಯೂ ಇರುವದರಿಂದ ಅವರನ್ನು ಕೈ ಬಿಡಲಿಲ್ಲ.
18ಅವರು ತಮಗೆ ಎರಕಹೊಯಿದ ಒಂದು ಕರುವನ್ನು ಮಾಡಿಕೊಂಡು -- ಐಗುಪ್ತದೊಳಗಿಂದ ನಿನ್ನನ್ನು ಬರಮಾಡಿದ ನಿನ್ನ ದೇವರು ಇದೇ ಎಂದು ಹೇಳಿ ನಿನ್ನನ್ನು ಬಹು ಉದ್ರೇಕಗೊಳಿಸಿದಾಗಲೂ
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ