ಲೂಕನು 20:11

ಅವನು ಇನ್ನೊಬ್ಬ ಆಳನ್ನು ತಿರಿಗಿ ಕಳುಹಿಸಿದನು. ಅವರು ಅವನನ್ನು ಸಹ ಹೊಡೆದು ಅವಮಾನಪಡಿಸಿ ಬರಿದಾಗಿ ಕಳುಹಿಸಿಬಿಟ್ಟರು.

ಸಂದರ್ಭದೊಂದಿಗೆ ಓದಿ · ಲೂಕನು 20

9ಇದಲ್ಲದೆ ಆತನು ಜನರಿಗೆ ಈ ಸಾಮ್ಯವನ್ನು ಹೇಳುವದಕ್ಕೆ ಪ್ರಾರಂಭಿಸಿ--ಒಬ್ಬಾನೊಬ್ಬ ಮನುಷ್ಯನು ದ್ರಾಕ್ಷೇತೋಟವನ್ನು ನೆಟ್ಟು ಅದನ್ನು ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬಹುಕಾಲದ ವರೆಗೆ ಒಂದು ದೂರ ದೇಶಕ್ಕೆ ಹೊರಟುಹೋದನು.

10ಫಲ ಕಾಲದಲ್ಲಿ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷೇ ತೊಟದ ಫಲವನ್ನು ಕೊಡುವಂತೆ ಅವನು ತನ್ನ ಆಳನ್ನು ಅವರ ಬಳಿಗೆ ಕಳುಹಿಸಿಕೊಟ್ಟನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು.

11ಅವನು ಇನ್ನೊಬ್ಬ ಆಳನ್ನು ತಿರಿಗಿ ಕಳುಹಿಸಿದನು. ಅವರು ಅವನನ್ನು ಸಹ ಹೊಡೆದು ಅವಮಾನಪಡಿಸಿ ಬರಿದಾಗಿ ಕಳುಹಿಸಿಬಿಟ್ಟರು.

12ಅವನು ತಿರಿಗಿ ಮೂರನೆಯವನನ್ನು ಕಳುಹಿಸಿದನು; ಆಗ ಅವರು ಅವನನ್ನು ಸಹ ಗಾಯಪಡಿಸಿ ಹೊರಗೆ ಹಾಕಿದರು.

13ಆಗ ದ್ರಾಕ್ಷೇತೋಟದ ಯಜಮಾನನು--ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿ ಸುವೆನು. ಅವರು ಇವನನ್ನು ನೋಡಿಯಾದರೂ ಇವ ನನ್ನು ಗೌರವಿಸಿಯಾರು ಎಂದು ಅಂದುಕೊಂಡನು.

ಲೂಕನು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी