ಯೆರೆಮಿಯ 12:2

ನೀನು ಅವರನ್ನು ನೆಟ್ಟಿದ್ದೀ, ಹೌದು, ಅವರು ಬೇರೂರಿದ್ದಾರೆ; ಬೆಳೆಯುತ್ತಾರೆ, ಹೌದು, ಫಲಫಲಿಸುತ್ತಾರೆ; ನೀನು ಅವರ ಬಾಯಲ್ಲಿ ಸವಿಾಪವಾಗಿದ್ದೀ, ಅವರ ಅಂತ ರಿಂದ್ರಿಯಗಳಿಗೆ ದೂರವೇ.

ಸಂದರ್ಭದೊಂದಿಗೆ ಓದಿ · ಯೆರೆಮಿಯ 12

1ಕರ್ತನೇ, ನಾನು ನಿನ್ನ ಸಂಗಡ ವಾದಿಸುವಾಗ ನೀನು ನೀತಿವಂತನೇ ಆಗಿದ್ದೀ; ಆದಾಗ್ಯೂ ನಾನು ನಿನ್ನ ಸಂಗಡ ನ್ಯಾಯವಾದವುಗಳನು ಕುರಿತು ಮಾತನಾಡಲು ಬಿಡು; ದುಷ್ಟರ ಮಾರ್ಗವು ಸಫಲವಾಗುವದು ಯಾಕೆ? ಮಹಾವಂಚನೆ ಮಾಡು ವವರೆಲ್ಲರು ಯಾಕೆ ಸುಖವಾಗಿರುವರು.

2ನೀನು ಅವರನ್ನು ನೆಟ್ಟಿದ್ದೀ, ಹೌದು, ಅವರು ಬೇರೂರಿದ್ದಾರೆ; ಬೆಳೆಯುತ್ತಾರೆ, ಹೌದು, ಫಲಫಲಿಸುತ್ತಾರೆ; ನೀನು ಅವರ ಬಾಯಲ್ಲಿ ಸವಿಾಪವಾಗಿದ್ದೀ, ಅವರ ಅಂತ ರಿಂದ್ರಿಯಗಳಿಗೆ ದೂರವೇ.

3ಓ ಕರ್ತನೇ, ನೀನು ನನ್ನನ್ನು ತಿಳಿದಿದ್ದೀ; ನನ್ನನ್ನು ನೋಡಿ ನನ್ನ ಹೃದಯವು ನಿನ್ನ ಕಡೆಗೆ ಶೋಧಿಸಿದ್ದೀ; ಕೊಲೆಗೆ ಕುರಿಗಳಂತೆ ಅವ ರನ್ನು ಎಳೆದುಬಿಡು, ಸಂಹಾರದ ದಿನಕ್ಕೆ ಅವರನ್ನು ಸಿದ್ಧಮಾಡು.

4ದೇಶವು ಅದರ ನಿವಾಸಿಗಳ ಕೆಟ್ಟತನ ಕ್ಕಾಗಿ ದುಃಖಿಸುವದೂ ಎಲ್ಲಾ ಹೊಲಗಳ ಹುಲ್ಲು ಒಣಗುವದೂ ಎಷ್ಟರ ಮಟ್ಟಿಗೆ? ಮೃಗಗಳೂ ಪಕ್ಷಿಗಳೂ ನಾಶವಾಗುತ್ತವೆ; ಅವರು--ಒಬ್ಬರೂ ನಮ್ಮ ಅಂತ್ಯವನ್ನು ನೋಡುವದಿಲ್ಲ ಎಂದು ಅಂದುಕೊಂಡಿದ್ದಾರೆ.

ಯೆರೆಮಿಯ 12 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी