೧ ಪೂರ್ವಕಾಲವೃತ್ತಾಂತ 29:8

ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವು ಗಳನ್ನು ಕರ್ತನ ಮನೆಯ ಬೊಕ್ಕಸಕ್ಕೆ ಕೊಟ್ಟರು.

ಸಂದರ್ಭದೊಂದಿಗೆ ಓದಿ · ೧ ಪೂರ್ವಕಾಲವೃತ್ತಾಂತ 29

6ಆಗ ಪಿತೃಗಳ ಪ್ರಧಾನರೂ ಇಸ್ರಾಯೇಲ್‌ ಗೋತ್ರಗಳ ಪ್ರಧಾನರೂ ಸಹಸ್ರಗಳ ಶತಗಳ ಅಧಿಪತಿಗಳೂ ಅರಸನ ಕೆಲಸದ ಯಜಮಾನರೂ ಇಷ್ಟಪೂರ್ವಕವಾಗಿ ಕಾಣಿಕೆಗಳನ್ನು ತಂದು

7ಕರ್ತನ ಮನೆಯ ಸೇವೆಗೋಸ್ಕರ ಬಂಗಾರ ದಲ್ಲಿ ಐದು ಸಾವಿರ ತಲಾಂತುಗಳನ್ನೂ ಬೆಳ್ಳಿಯಲ್ಲಿ ಹತ್ತು ಸಾವಿರ ತಲಾಂತುಗಳನ್ನೂ ತಾಮ್ರದಲ್ಲಿ ಹದಿ ನೆಂಟು ಸಾವಿರ ತಲಾಂತುಗಳನ್ನೂ ಕಬ್ಬಿಣದಲ್ಲಿ ಲಕ್ಷ ತಲಾಂತುಗಳನ್ನೂ ಕೊಟ್ಟರು.

8ಇದಲ್ಲದೆ ಯಾರ ಬಳಿಯಲ್ಲಿ ಅಮೂಲ್ಯ ರತ್ನಗಳು ಇದ್ದವೋ ಅವರು ಗೇರ್ಷೋನ್ಯನಾದ ಯೆಹೀಯೇಲನ ಕೈಯಿಂದ ಅವು ಗಳನ್ನು ಕರ್ತನ ಮನೆಯ ಬೊಕ್ಕಸಕ್ಕೆ ಕೊಟ್ಟರು.

9ಆಗ ಜನರು ಸಂತೋಷವಾಗಿ ಕಾಣಿಕೆಗಳನ್ನು ಅರ್ಪಿಸಿದ್ದರಿಂದ ಜನರು ಸಂತೋಷಪಟ್ಟರು. ಅವರು ಪೂರ್ಣ ಮನಸ್ಸಿನಿಂದ ಮನಃಪೂರ್ವಕವಾಗಿ ಕರ್ತನಿಗೆ ಅರ್ಪಿಸಿದರು. ಅರಸನಾದ ದಾವೀದನು ಮಹಾ ಸಂತೋಷದಿಂದ ಸಂತೋಷಪಟ್ಟನು.

10ಆಗ ದಾವೀದನು ಸಮಸ್ತ ಕೂಟದ ಮುಂದೆ ಕರ್ತನನ್ನು ಕೊಂಡಾಡಿ ಹೇಳಿದ್ದೇನಂದರೆ -- ನಮ್ಮ ತಂದೆ ಯಾದ ಇಸ್ರಾಯೇಲಿನ ದೇವರಾದ ಕರ್ತನೇ, ನೀನು ಯುಗಯುಗಾಂತರಗಳಿಂದ ಯುಗಯುಗಾಂತರ ಗಳಿಗೂ ಸ್ತುತಿಸಲ್ಪಡುವವನಾಗಿದ್ದೀ.

೧ ಪೂರ್ವಕಾಲವೃತ್ತಾಂತ 29 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी