ಧರ್ಮೋಪದೇಶಕಾಂಡ 19:17

ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಕರ್ತನ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 19

15ಒಬ್ಬನ ಅಕ್ರಮದ ನಿಮಿತ್ತವೂ ಅವನು ಮಾಡುವ ಎಲ್ಲಾ ಪಾಪದ ನಿಮಿತ್ತವೂ ಅವನಿಗೆ ವಿರೋಧವಾಗಿ ಒಬ್ಬನು ಸಾಕ್ಷಿಯಾಗಿ ನಿಂತುಕೊಳ್ಳಬಾರದು; ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ಕಾರ್ಯವೆಲ್ಲಾ ಸ್ಥಿರವಾಗುವದು.

16ತಪ್ಪಾದ ಸಾಕ್ಷಿಯವನು ಒಬ್ಬ ಮನುಷ್ಯನ ಮೇಲೆ ಅವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಕೊಡುವದಕ್ಕೆ ಎದ್ದರೆ

17ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಕರ್ತನ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು.

18ನ್ಯಾಯಾಧಿಪತಿಗಳು ಒಳ್ಳೆ ವಿಚಾರಣೆಮಾಡಬೇಕು; ಆಗ ಇಗೋ, ಆ ಸಾಕ್ಷಿ ಸುಳ್ಳುಸಾಕ್ಷಿಯಾಗಿದ್ದರೆ,ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆ

19ಅವನು ತನ್ನ ಸಹೋದರನಿಗೆ ಮಾಡುವದಕ್ಕೆ ಯೋಚಿಸಿದ ಪ್ರಕಾರ ಅವನಿಗೆ ಮಾಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು.

ಧರ್ಮೋಪದೇಶಕಾಂಡ 19 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी