೨ ಸಮುವೇಲನು 15:34

ನಾನು ಇಂದಿನ ವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು ಎಂದು ಹೇಳುವುದಾದರೆ ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆ ಯನ್ನು ವ್ಯರ್ಥಮಾಡಬಹುದು.

ಸಂದರ್ಭದೊಂದಿಗೆ ಓದಿ · ೨ ಸಮುವೇಲನು 15

32ದಾವೀದನು ಪರ್ವತದ ತುದಿಗೆ ಬಂದು ಅಲ್ಲಿ ದೇವರನ್ನು ಆರಾಧಿಸಿ ದಾಗ ಏನಾಯಿತಂದರೆ ಇಗೋ, ಅರ್ಕೀಯನಾದ ಹೂಷೈ ತನ್ನ ಅಂಗಿಯನ್ನು ಹರಿದುಕೊಂಡು ತನ್ನ ತಲೆಯ ಮೇಲೆ ಮಣ್ಣು ಹೊಯ್ದುಕೊಂಡು ಅವನನ್ನು ಎದುರುಗೊಳ್ಳಲು ಬಂದನು.

33ಆಗ ದಾವೀದನು ಅವನಿಗೆ--ನೀನು ನನ್ನ ಸಂಗಡ ಬಂದರೆ ನನಗೆ ಭಾರವಾಗಿರುವಿ; ನೀನು ಪಟ್ಟಣಕ್ಕೆ ತಿರಿಗಿ ಹೋಗಿ ಅಬ್ಷಾಲೋಮನಿಗೆ--ಅರಸನೇ, ನಾನು ನಿನ್ನ ಸೇವಕ ನಾಗಿರುವೆನು.

34ನಾನು ಇಂದಿನ ವರೆಗೂ ಹೇಗೆ ನಿನ್ನ ತಂದೆಗೆ ಸೇವಕನಾಗಿದ್ದೆನೋ ಹಾಗೆಯೇ ಈಗ ನಿನ್ನ ಸೇವಕನಾಗಿರುವೆನು ಎಂದು ಹೇಳುವುದಾದರೆ ನೀನು ನನಗೋಸ್ಕರ ಅಹೀತೋಫೆಲನ ಆಲೋಚನೆ ಯನ್ನು ವ್ಯರ್ಥಮಾಡಬಹುದು.

35ಅಲ್ಲಿ ಯಾಜಕ ರಾದ ಚಾದೋಕನೂ ಎಬ್ಯಾತಾರನೂ ನಿನ್ನ ಬಳಿಯಲ್ಲಿ ಲ್ಲವೋ? ಆದದರಿಂದ ನೀನು ಅರಸನ ಮನೆಯಲ್ಲಿ ಯಾವ ವರ್ತಮಾನವನ್ನು ಕೇಳುತ್ತೀಯೋ ಅದನ್ನು ಯಾಜಕರಾದ ಚಾದೋಕನಿಗೂ ಎಬ್ಯಾತಾರನಿಗೂ ತಿಳಿಸು.

36ಇಗೋ, ಅಲ್ಲಿ ಅವರ ಸಂಗಡ ಅವರ ಇಬ್ಬರು ಮಕ್ಕಳು ಇದ್ದಾರೆ: ಚಾದೋಕನ ಮಗನಾದ ಅಹೀಮಾಚನೂ ಎಬ್ಯಾತಾರನ ಮಗನಾದ ಯೋನಾ ತಾನನೂ. ನೀವು ಕೇಳಿದ ವರ್ತಮಾನವನ್ನೆಲ್ಲಾ ಅವರ ಮೂಲಕ ನನಗೆ ಹೇಳಿ ಕಳುಹಿಸಬೇಕು ಅಂದನು.

೨ ಸಮುವೇಲನು 15 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी