ಯೆಹೆಜ್ಕೇಲನು 39:8

ಇಗೋ, ಇದು ಬಂತು, ಮತ್ತು ಇದು ನೆರವೇರಿತು; ನಾನು ಮುಂತಿಳಿಸಿದ ದಿನವು ಇದೇ ಎಂದು ದೇವರಾದ ಕರ್ತನು ಹೇಳುತ್ತಾನೆ;

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 39

6ನಾನು ಮಾಗೋಗ್‌ ಮತ್ತು ಅವ ರೊಂದಿಗೆ ದ್ವೀಪಗಳಲ್ಲಿ ನಿರ್ಲಕ್ಷ್ಯವಾಗಿ ವಾಸಿಸುವವರ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ; ಅವರು ನಾನೇ ಕರ್ತನೆಂದು ತಿಳಿಯುವರು.

7ಹೀಗೆ ನನ್ನ ಜನರಾದ ಇಸ್ರಾಯೇಲಿನ ಮಧ್ಯದಲ್ಲಿ ನಾನು ನನ್ನ ಪರಿಶುದ್ಧವಾದ ಹೆಸರನ್ನು ವ್ಯಕ್ತಪಡಿಸುತ್ತೇನೆ; ಅವರು ಇನ್ನೆಂದಿಗೂ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರವಾಗದ ಹಾಗೆ ನಾನು ಮಾಡುತ್ತೇನೆ. ಅನ್ಯಜನರು ಇಸ್ರಾಯೇಲ್ಯರಲ್ಲಿ ಒಬ್ಬ ಪರಿಶುದ್ಧನಾದ ಕರ್ತನು ನಾನೇ ಎಂದು ತಿಳಿಯುವರು.

8ಇಗೋ, ಇದು ಬಂತು, ಮತ್ತು ಇದು ನೆರವೇರಿತು; ನಾನು ಮುಂತಿಳಿಸಿದ ದಿನವು ಇದೇ ಎಂದು ದೇವರಾದ ಕರ್ತನು ಹೇಳುತ್ತಾನೆ;

9ಆ ಇಸ್ರಾಯೇಲಿನ ಪಟ್ಟಣಗಳ ನಿವಾಸಿಗಳು ಹೋಗಿ, ಆಯುಧಗಳಾದ ಗುರಾಣಿ ಗಳನ್ನು ಖೇಡ್ಯಗಳನ್ನೂ ಬಿಲ್ಲುಗಳನ್ನೂ ಬಾಣಗಳನ್ನೂ ಕೈದೊಣ್ಣೆಗಳನ್ನೂ ಭಲ್ಲೆಗಳನ್ನೂ ಬೆಂಕಿಹಚ್ಚಿ ಸುಡುವರು; ಅವರು ಅವುಗಳನ್ನು ಏಳು ವರ್ಷಗಳು ಬೆಂಕಿಯಿಂದ ಸುಡುವರು.

10ಅದಕ್ಕಾಗಿ ಅವರು ಬಯಲಿನಿಂದ ಮರ ಗಳನ್ನಾಗಲಿ ತೆಗೆದುಕೊಳ್ಳುವುದಿಲ್ಲ, ಅಥವಾ ಅರಣ್ಯ ದಲ್ಲಿ ಯಾವುದನ್ನೂ ಕತ್ತರಿಸಿಕೊಳ್ಳುವದೂ ಇಲ್ಲ; ಅವರು ಆಯುಧಗಳನ್ನು ಬೆಂಕಿಯಿಂದಲೇ ಸುಡುವರು; ಅವರು ಸೂರೆಯಾದವುಗಳನ್ನು ಸೂರೆಮಾಡುವರು ಮತ್ತು ಕೊಳ್ಳೆಹೊಡೆದವರನ್ನು ತಾವು ಕೊಳ್ಳೆಹೊಡೆ ಯುವರು ಎಂದು ದೇವರಾದ ಕರ್ತನು ಹೇಳುತ್ತಾನೆ.

ಯೆಹೆಜ್ಕೇಲನು 39 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी