ದಾವೀದನು ಸೌಲನಿಗೆ--ಇಗೋ, ದಾವೀದನು ನಿನಗೆ ಕೇಡುಮಾಡ ಹುಡುಕು ತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಯಾಕೆ ಕೇಳುತ್ತಿದ್ದೀ?
7ಹೀಗೆಯೇ ದಾವೀದನು ತನ್ನ ಮನುಷ್ಯರನ್ನು ಸೌಲನ ಮೇಲೆ ಬೀಳಗೊಡದೆ ಈ ಮಾತುಗಳಿಂದ ಅವರನ್ನು ತಡೆದನು. ಆದರೆ ಸೌಲನು ಎದ್ದು ಗವಿಯನ್ನು ಬಿಟ್ಟು ತನ್ನ ಮಾರ್ಗವಾಗಿ ಹೊರಟು ಹೋದನು.
8ತರುವಾಯ ದಾವೀದನು ಎದ್ದು ಗವಿ ಯಿಂದ ಹೊರಟು ಸೌಲನ ಹಿಂದೆ--ಅರಸನಾದ ನನ್ನ ಒಡೆಯನೇ ಎಂದು ಕೂಗಿದನು. ಸೌಲನು ಹಿಂದಿರುಗಿ ನೋಡಿದಾಗ ದಾವೀದನು ನೆಲದ ವರೆಗೆ ಬೊಗ್ಗಿ ವಂದಿಸಿದನು.
9ದಾವೀದನು ಸೌಲನಿಗೆ--ಇಗೋ, ದಾವೀದನು ನಿನಗೆ ಕೇಡುಮಾಡ ಹುಡುಕು ತ್ತಾನೆಂದು ಹೇಳುವ ಮನುಷ್ಯರ ಮಾತುಗಳನ್ನು ಯಾಕೆ ಕೇಳುತ್ತಿದ್ದೀ?
10ಇಗೋ, ಕರ್ತನು ಈ ಹೊತ್ತು ಗವಿಯಲ್ಲಿ ನಿನ್ನನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಟ್ಟನೆಂಬದನ್ನು ಈ ದಿನ ನಿನ್ನ ಕಣ್ಣುಗಳು ನೋಡಿದವು. ಕೆಲವರು ನಿನ್ನನ್ನು ಕೊಂದುಹಾಕಲು ಹೇಳಿದರು; ಆದರೆ ನನ್ನ ಕಣ್ಣು ನಿನ್ನನ್ನು ಕರುಣಿಸಿತು; ನಾನು--ಅವನು ಕರ್ತನ ಅಭಿಷಿಕ್ತನಾದದರಿಂದ ನನ್ನ ಕೈ ನನ್ನ ಒಡೆಯನಿಗೆ ವಿರೋಧವಾಗಿ ಚಾಚೆನು ಅಂದೆನು.
11ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ