ಧರ್ಮೋಪದೇಶಕಾಂಡ 6:23

ಆತನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ ದೇಶವನ್ನು ನಮಗೆ ಕೊಟ್ಟು ನಾವು ಅದರಲ್ಲಿ ಪ್ರವೇಶಮಾಡುವ ಹಾಗೆ ಅಲ್ಲಿಂದ ನಮ್ಮನ್ನು ಹೊರಗೆ ಬರಮಾಡಿದನು.

ಸಂದರ್ಭದೊಂದಿಗೆ ಓದಿ · ಧರ್ಮೋಪದೇಶಕಾಂಡ 6

21ನಾವು ಐಗುಪ್ತದಲ್ಲಿ ಫರೋಹನಿಗೆ ದಾಸ ರಾಗಿದ್ದೆವು; ಕರ್ತನು ಬಲವಾದ ಕೈಯಿಂದ ನಮ್ಮನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡಿದನು.

22ಕರ್ತನು ನಮ್ಮ ಕಣ್ಣುಗಳ ಮುಂದೆ ಐಗುಪ್ತದಲ್ಲಿ ಫರೋಹನ ಮೇಲೆಯೂ ಅವನ ಎಲ್ಲಾ ಮನೆಯವರ ಮೇಲೆಯೂ ಬಹು ಕಠಿಣವಾದ ಬಾಧೆಗಳಿಂದ ಅದ್ಭುತ ಗಳನ್ನೂ ಸೂಚನೆಗಳನ್ನೂ ತೋರಿಸಿದನು.

23ಆತನು ನಮ್ಮ ಪಿತೃಗಳಿಗೆ ಪ್ರಮಾಣಮಾಡಿದ ದೇಶವನ್ನು ನಮಗೆ ಕೊಟ್ಟು ನಾವು ಅದರಲ್ಲಿ ಪ್ರವೇಶಮಾಡುವ ಹಾಗೆ ಅಲ್ಲಿಂದ ನಮ್ಮನ್ನು ಹೊರಗೆ ಬರಮಾಡಿದನು.

24ನಮಗೆ ಎಂದೆಂದಿಗೂ ಒಳ್ಳೇದಾಗುವ ಹಾಗೆಯೂ ಈ ದಿನದಂತೆ ನಾವು ಬದುಕುವ ಹಾಗೆಯೂ ನಾವು ಈ ನಿಯಮಗಳನ್ನೆಲ್ಲಾ ಕೈಕೊಂಡು ನಮ್ಮ ದೇವರಾದ ಕರ್ತನಿಗೆ ಭಯಪಡಬೇಕೆಂದು ಕರ್ತನು ನಮಗೆ ಆಜ್ಞಾಪಿಸಿದ್ದಾನೆ.

25ಆತನು ನಮಗೆ ಆಜ್ಞಾಪಿಸಿದಂತೆ ನಮ್ಮ ದೇವರಾದ ಕರ್ತನ ಮುಂದೆ ಈ ಎಲ್ಲಾ ಆಜ್ಞೆಯನ್ನು ಕೈಕೊಂಡು ನಡೆದರೆ ಅದು ನಮಗೆ ನೀತಿಯಾಗಿರುವದು.

ಧರ್ಮೋಪದೇಶಕಾಂಡ 6 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी