ನೆಹೆಮಿಯ 8:13

ಎರಡನೇ ದಿವಸದಲ್ಲಿ ಸಮಸ್ತ ಜನರ ಪಿತೃಗಳಲ್ಲಿ ರುವ ಮುಖ್ಯರಾದವರೂ ಯಾಜಕರೂ ಲೇವಿಯರೂ ನ್ಯಾಯಪ್ರಮಾಣದ ಮಾತುಗಳನ್ನು ತಿಳುಕೊಳ್ಳುವ ಹಾಗೆ ಶಾಸ್ತ್ರಿಯಾದ ಎಜ್ರನ ಬಳಿಗೆ ಬಂದರು.

ಸಂದರ್ಭದೊಂದಿಗೆ ಓದಿ · ನೆಹೆಮಿಯ 8

11ಹೀಗೆಯೇ ಲೇವಿಯರು--ಈ ದಿನವು ಪರಿಶುದ್ಧವಾದದರಿಂದ ನೀವು ಮೌನವಾಗಿದ್ದು ವ್ಯಥೆಪಡಬೇಡಿರೆಂದು ಹೇಳಿ ಜನರನ್ನು ಸುಮ್ಮನಿರಿಸಿದರು.

12ಆಗ ಜನರೆಲ್ಲರೂ ಅವರಿಗೆ ತಿಳಿಸಿದ ಮಾತುಗಳನ್ನು ಗ್ರಹಿಸಿದ್ದರಿಂದ ಅವರು ತಿನ್ನಲೂ ಕುಡಿಯಲೂ ಭಾಗಗಳನ್ನು ಕಳುಹಿ ಸಲೂ ಸಂತೋಷಿಸಲೂ ಹೊರಟು ಹೋದರು.

13ಎರಡನೇ ದಿವಸದಲ್ಲಿ ಸಮಸ್ತ ಜನರ ಪಿತೃಗಳಲ್ಲಿ ರುವ ಮುಖ್ಯರಾದವರೂ ಯಾಜಕರೂ ಲೇವಿಯರೂ ನ್ಯಾಯಪ್ರಮಾಣದ ಮಾತುಗಳನ್ನು ತಿಳುಕೊಳ್ಳುವ ಹಾಗೆ ಶಾಸ್ತ್ರಿಯಾದ ಎಜ್ರನ ಬಳಿಗೆ ಬಂದರು.

14ಆಗ ಅವರು ಏಳನೇ ತಿಂಗಳ ಹಬ್ಬದಲ್ಲಿ ಇಸ್ರಾಯೇಲಿನ ಮಕ್ಕಳು ಗುಡಾರಗಳಲ್ಲಿ ವಾಸವಾಗಿರಬೇಕೆಂದು ಕರ್ತ ನು ಮೋಶೆಯ ಮುಖಾಂತರ ಆಜ್ಞಾಪಿಸಿದ ನ್ಯಾಯ ಪ್ರಮಾಣದಲ್ಲಿ ಬರೆದಿದ್ದದ್ದನ್ನು ಕಂಡರು.

15ಏನಂದರೆ, ಬರೆದಿರುವ ಪ್ರಕಾರ ಗುಡಾರ ಹಾಕುವ ಹಾಗೆ ಬೆಟ್ಟಕ್ಕೆ ಹೋಗಿ ಇಪ್ಪೆಯ ಕೊಂಬೆಗಳನ್ನೂ ತೈಲಗಿಡದ ಕೊಂಬೆ ಗಳನ್ನೂ ಗಂಧದ ಗಿಡದ ಕೊಂಬೆಗಳನ್ನೂ ತಾಳೆಯ ಕೊಂಬೆಗಳನ್ನೂ ದಟ್ಟವಾಗಿರುವ ಗಿಡದ ಕೊಂಬೆಗಳನ್ನೂ ತಕ್ಕೊಂಡು ಬನ್ನಿರಿ ಎಂದು ತಮ್ಮ ಎಲ್ಲಾ ಪಟ್ಟಣಗಳ ಲ್ಲಿಯೂ ಯೆರೂಸಲೇಮಿನಲ್ಲಿಯೂ ಬಹಿರಂಗವಾಗಿ ಸಾರಬೇಕು ಎಂಬದೇ.

ನೆಹೆಮಿಯ 8 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी