ಮಿಕ 5:2

ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಸಾವಿರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳ ಗಿಂದ ನನಗಾಗಿ ಹೊರಡುವನು; ಆತನ ಹೊರಡೋಣ ಗಳು ಪೂರ್ವದಿಂದಲೂ ಅನಾದಿ ದಿವಸಗಳಿಂದಲೂ ಅವೆ.

ಸಂದರ್ಭದೊಂದಿಗೆ ಓದಿ · ಮಿಕ 5

1ಈಗ ಓ ಸೈನ್ಯಗಳ ಕುಮಾರ್ತೆಯೇ, ಗುಂಪುಗಳಾಗಿ ಕೂಡಿಕೊಳ್ಳಿರಿ; ಅವನು ನಮಗೆ ಮುತ್ತಿಗೆ ಹಾಕಿದ್ದಾನೆ. ಇಸ್ರಾಯೇಲಿನ ನ್ಯಾಯಾಧಿಪತಿಯನ್ನು ಕೋಲಿನಿಂದ ಕೆನ್ನೆಯ ಮೇಲೆ ಹೊಡೆಯುತ್ತಾರೆ.

2ಆದರೆ ಎಫ್ರಾತದ ಬೇತ್ಲೆಹೇಮೇ, ನೀನು ಯೆಹೂದದ ಸಾವಿರಗಳಲ್ಲಿ ಸಣ್ಣದಾಗಿದ್ದರೂ ಇಸ್ರಾಯೇಲಿನಲ್ಲಿ ದೊರೆತನ ಮಾಡತಕ್ಕವನು ನಿನ್ನೊಳ ಗಿಂದ ನನಗಾಗಿ ಹೊರಡುವನು; ಆತನ ಹೊರಡೋಣ ಗಳು ಪೂರ್ವದಿಂದಲೂ ಅನಾದಿ ದಿವಸಗಳಿಂದಲೂ ಅವೆ.

3ಆದದರಿಂದ ಹೆರುವವಳು ಹೆರುವ ಕಾಲದ ವರೆಗೂ ಅವನು ಅವರನ್ನು ಒಪ್ಪಿಸಿಬಿಡುವನು; ಆಗ ಅವನ ಸಹೋದರರಲ್ಲಿ ಉಳಿದವರು ಇಸ್ರಾಯೇಲಿನ ಮಕ್ಕಳ ಬಳಿಗೆ ಹಿಂದಿರುಗುವರು.

4ಆತನು ಕರ್ತನ ಬಲದಲ್ಲಿಯೂ ತನ್ನ ದೇವರಾದ ಕರ್ತನ ಹೆಸರಿನಲ್ಲಿ ಘನತೆಯಲ್ಲಿಯೂ ನಿಂತುಕೊಂಡು ಮೇಯಿಸುವನು; ಮತ್ತು ಅವರು ನೆಲೆಯಾಗಿರುವರು, ಈಗ ಆತನು ಭೂಮಿಯ ಅಂತ್ಯಗಳ ಮಟ್ಟಿಗೂ ದೊಡ್ಡವನಾಗಿ ರುವನು.

ಮಿಕ 5 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी