ಯೆಶಾಯ 33:1

ನಿನಗೆ ಅಯ್ಯೊ ಸೂರೆಯಾಗದಿದ್ದರೂ ನೀನು ಸೂರೆಮಾಡಿದಿ, ನಿನಗೆ ದ್ರೋಹ ಮಾಡದಿದ್ದರೂ ನೀನು ದ್ರೋಹ ಮಾಡಿದಿ, ನೀನು ಸೂರೆ ಮಾಡುವದನ್ನು ಮುಗಿಸಿದಾಗ ನೀನು ಸೂರೆ ಯಾಗುವಿ, ದ್ರೋಹ ಮಾಡುವುದನ್ನು ಬಿಟ್ಟ ಮೇಲೆ ನಿನಗೂ ದ್ರೋಹ ಮಾಡುವರು.

ಸಂದರ್ಭದೊಂದಿಗೆ ಓದಿ · ಯೆಶಾಯ 33

1ನಿನಗೆ ಅಯ್ಯೊ ಸೂರೆಯಾಗದಿದ್ದರೂ ನೀನು ಸೂರೆಮಾಡಿದಿ, ನಿನಗೆ ದ್ರೋಹ ಮಾಡದಿದ್ದರೂ ನೀನು ದ್ರೋಹ ಮಾಡಿದಿ, ನೀನು ಸೂರೆ ಮಾಡುವದನ್ನು ಮುಗಿಸಿದಾಗ ನೀನು ಸೂರೆ ಯಾಗುವಿ, ದ್ರೋಹ ಮಾಡುವುದನ್ನು ಬಿಟ್ಟ ಮೇಲೆ ನಿನಗೂ ದ್ರೋಹ ಮಾಡುವರು.

2ಓ ಕರ್ತನೇ, ನಮ್ಮ ಕಡೆಗೆ ಕೃಪೆತೋರಿಸು, ನಿನಗೋಸ್ಕರ ನಾವು ಕಾದಿದ್ದೇವೆ. ಪ್ರತಿ ಮುಂಜಾನೆ ನಮಗೆ ಭುಜಬಲವಾಗಿ ಇಕ್ಕಟ್ಟಿನ ಕಾಲದಲ್ಲಿ ನಮ್ಮ ರಕ್ಷಣೆಯಾಗಿಯೂ ಇರು.

3ಕೋಲಾಹಲದ ಶಬ್ದಕ್ಕೆ ಜನರು ಓಡಿಹೋಗುತ್ತಾರೆ, ನೀನು ಏಳುವಾಗ ರಾಜ್ಯಗಳು ಚದರಿಹೋಗುತ್ತವೆ.

ಯೆಶಾಯ 33 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी