೧ ಕೊರಿಂಥದವರಿಗೆ 10:29

ಆದರೆ ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ, ಬೇರೆಯವನ ಮನಸ್ಸಾಕ್ಷಿಗಾಗಿ ನಾನು ಹೇಳುತ್ತೇನೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?

ಸಂದರ್ಭದೊಂದಿಗೆ ಓದಿ · ೧ ಕೊರಿಂಥದವರಿಗೆ 10

27ನಂಬದವರಲ್ಲಿ ಯಾವನಾದರೂ ನಿಮ್ಮನ್ನು ಊಟಕ್ಕೆ ಕರೆಯುವಾಗ ಹೋಗುವದಕ್ಕೆ ನಿಮಗಿಷ್ಟವಿದ್ದರೆ ನಿಮ ಗೇನು ಬಡಿಸಿದರೂ ಅದನ್ನು ಮನಸ್ಸಾಕ್ಷಿಯ ನಿಮಿತ್ತ ಯಾವ ಪ್ರಶ್ನೆಯನ್ನೂ ಕೇಳದೆ ತಿನ್ನಿರಿ.

28ಆದರೆ ಒಬ್ಬನು ನಿಮಗೆ--ಇದು ವಿಗ್ರಹಕ್ಕೆ ಬಲಿಕೊಟ್ಟದ್ದು ಎಂದು ಹೇಳಿದರೆ ಈ ವಿಷಯವನ್ನು ತಿಳಿಸಿದವನ ನಿಮಿತ್ತ ವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ತಿನ್ನ ಬೇಡಿರಿ; ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ?

29ಆದರೆ ನಿನ್ನ ಸ್ವಂತ ಮನಸ್ಸಾಕ್ಷಿಗಾಗಿ ಅಲ್ಲ, ಬೇರೆಯವನ ಮನಸ್ಸಾಕ್ಷಿಗಾಗಿ ನಾನು ಹೇಳುತ್ತೇನೆ. ಮತ್ತೊಬ್ಬನ ಮನಸ್ಸಾಕ್ಷಿಯ ನಿಮಿತ್ತ ನನ್ನ ಸ್ವಾತಂತ್ರ್ಯಕ್ಕೆ ಯಾಕೆ ತೀರ್ಪಾಗಬೇಕು?

30ನಾನು ಕೃಪೆಯಿಂದ ಪಾಲುಗಾರನಾಗಿ ಯಾವದಕ್ಕೋಸ್ಕರ ಕೃತಜ್ಞತೆಯನ್ನು ಸಲ್ಲಿಸುತ್ತೇನೋ ಅದರ ವಿಷಯದಲ್ಲಿ ನಾನು ಯಾಕೆ ದೂಷಿಸಲ್ಪಡಬೇಕು?

31ಆದದರಿಂದ ನೀವು ತಿಂದರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನು ದೇವರ ಮಹಿಮೆಗಾಗಿ ಮಾಡಿರಿ.

೧ ಕೊರಿಂಥದವರಿಗೆ 10 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी