ಯೆಹೆಜ್ಕೇಲನು 13:4

ಓ ಇಸ್ರಾಯೇಲೇ, ನಿನ್ನ ಪ್ರವಾದಿಗಳು ನಿರ್ಜನ ಸ್ಥಳಗಳಲ್ಲಿರುವ ನರಿಗಳ ಹಾಗೆ ಇದ್ದಾರೆ.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 13

2ಮನುಷ್ಯಪುತ್ರನೇ, ಪ್ರವಾದಿ ಸುತ್ತಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ವಿರುದ್ಧ ವಾಗಿ ನೀನು ಪ್ರವಾದಿಸಿ, ತಮ್ಮ ಸ್ವಂತ ಹೃದಯಗ ಳೊಳಗಿಂದ ಪ್ರವಾದಿಸುತ್ತಿರುವವರಿಗೆ ಹೀಗೆ ಹೇಳು --ಕರ್ತನ ವಾಕ್ಯವನ್ನು ಕೇಳಿರಿ;

3ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುತ್ತಿರುವ ಓ ಮೂರ್ಖ ಪ್ರವಾದಿಗಳೇ, ನಿಮಗೆ ಅಯ್ಯೋ!

4ಓ ಇಸ್ರಾಯೇಲೇ, ನಿನ್ನ ಪ್ರವಾದಿಗಳು ನಿರ್ಜನ ಸ್ಥಳಗಳಲ್ಲಿರುವ ನರಿಗಳ ಹಾಗೆ ಇದ್ದಾರೆ.

5ಕರ್ತನ ದಿನದಲ್ಲಿ ಯುದ್ಧಕ್ಕೆ ನಿಲ್ಲ ಬೇಕೆಂದು ಇಸ್ರಾಯೇಲ್‌ ಮನೆತನದವರಿಗಾಗಿ ಬೇಲಿ ಯನ್ನು ಕಟ್ಟಲಿಲ್ಲ, ನೀವು ಪೌಳಿಯ ಒಡಕುಗಳನ್ನೇರ ಲಿಲ್ಲ.

6ಅವರು ವ್ಯರ್ಥವಾದದ್ದನ್ನೂ ಸುಳ್ಳು ಭವಿಷ್ಯ ವಾದದ್ದನ್ನೂ ನೋಡಿದ್ದಾರೆಂದು ಕರ್ತನು ಹೇಳುತ್ತಾನೆ; ಆದರೆ ಕರ್ತನು ಅವರನ್ನು ಕಳುಹಿಸಲಿಲ್ಲ; ತಾವು ನುಡಿದ ಮಾತು ಬೇರೆಯವರು ನಿರೀಕ್ಷಿಸುವಂತೆ ಮಾಡುತ್ತಾರೆ.

ಯೆಹೆಜ್ಕೇಲನು 13 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी