ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು.
10ಇದಲ್ಲದೆ ಅನ್ಯರ ಮಕ್ಕಳು ನಿನ್ನ ಗೋಡೆಗಳನ್ನು ಕಟ್ಟುವರು; ಅವರ ಅರಸರು ಸಹ ನಿನಗೆ ಸೇವೆ ಮಾಡುವರು; ನನ್ನ ರೌದ್ರದಲ್ಲಿ ನಿನ್ನನ್ನು ಹೊಡೆದೆನು; ಆದರೆ ನನ್ನ ಕಟಾಕ್ಷದಲ್ಲಿ ನಿನ್ನನ್ನು ಕರುಣಿಸುವೆನು.
11ಆದದರಿಂದ ನಿನ್ನ ಬಾಗಿಲುಗಳು ಯಾವಾಗಲೂ ತೆರೆದಿರುವವು; ಅನ್ಯಜನಾಂಗಗಳ ಆಸ್ತಿ ನಿನ್ನ ಬಳಿಗೆ ತರಲ್ಪಟ್ಟು, ಅವರ ಅರಸರು ಸಹ ನಡಿಸಲ್ಪಡುವದ ಕ್ಕೋಸ್ಕರವೇ ಹಗಲು ಇಲ್ಲವೆ ರಾತ್ರಿ ಅವು ಮುಚ್ಚಲ್ಪ ಡುವದಿಲ್ಲ.
12ನಿನ್ನನ್ನು ಸೇವಿಸದ ಜನಾಂಗವೂ ರಾಜ್ಯವೂ ನಾಶವಾಗುವದು; ಹೌದು, ಆ ಜನಾಂಗ ಗಳು ಸಂಪೂರ್ಣವಾಗಿ ಹಾಳಾಗುವವು.
13ಲೆಬನೋ ನಿನ ವೈಭವವು ಸುರಗಿ, ದಿಂಡುಗ, ಹೊನ್ನೆ ಮರಗಳು ಕೂಡ ನನ್ನ ಪರಿಶುದ್ಧ ಸ್ಥಳವನ್ನು ಶೃಂಗರಿಸುವದಕ್ಕೆ ನಿನ್ನ ಬಳಿಗೆ ಬರುವವು; ನನ್ನ ಪಾದಗಳ ಸ್ಥಳವನ್ನು ನಾನು ಗೌರವವುಳ್ಳದ್ದಾಗಿ ಮಾಡುವೆನು.
14ಆಗ ನಿನ್ನನ್ನು ಕುಗ್ಗಿಸಿದವರ ಮಕ್ಕಳು ಬೊಗ್ಗಿಕೊಂಡು ನಿನ್ನ ಬಳಿಗೆ ಬರುವರು; ನಿನ್ನನ್ನು ಅಸಡ್ಡೆಮಾಡಿದವರೆಲ್ಲರು ನಿನ್ನ ಅಂಗಾಲುಗಳಿಗೆ ಸರಿಯಾಗಿ ಅಡ್ಡಬಿದ್ದು ನಿನ್ನನ್ನು ಕರ್ತನ ಪಟ್ಟಣವೆಂದು ಇಸ್ರಾಯೇಲಿನ ಪರಿಶುದ್ಧನ ಚೀಯೋ ನೆಂದೂ ಕರೆಯುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ