ಕೀರ್ತನೆಗಳು 55:20

ಅವನು ತನ್ನ ಸಂಗಡ ಸಮಾಧಾನವುಳ್ಳವರಿಗೆ ವಿರೋಧವಾಗಿ ತನ್ನ ಕೈಗಳನ್ನು ಹಾಕಿದ್ದಾನೆ; ತನ್ನ ಒಡಂಬಡಿಕೆಯನ್ನು ಮುರಿದಿದ್ದಾನೆ.

ಸಂದರ್ಭದೊಂದಿಗೆ ಓದಿ · ಕೀರ್ತನೆಗಳು 55

18ನನಗೆ ವಿರೋಧ ವಾಗಿದ್ದ ಕಾಳಗದಿಂದ ಆತನು ನನ್ನ ಪ್ರಾಣವನ್ನು ಸಮಾಧಾನದಲ್ಲಿ ವಿಮೋಚಿಸಿದ್ದಾನೆ; ಹೇಗಂದರೆ ಅನೇಕರು ನನ್ನ ಸಂಗಡ ಇದ್ದರು.

19ಅನಾದಿಯಿಂದ ಇರುವ ದೇವರು ಲಕ್ಷ್ಯವಿಟ್ಟು ಅವರನ್ನು ಕುಗ್ಗಿಸುವನು. ಸೆಲಾ. ಅವರಲ್ಲಿ ಮಾರ್ಪಾಡುವಿಕೆಗಳು ಇಲ್ಲ; ಆದಕಾರಣ ದೇವರಿಗೆ ಅವರು ಭಯಪಡುವದಿಲ್ಲ.

20ಅವನು ತನ್ನ ಸಂಗಡ ಸಮಾಧಾನವುಳ್ಳವರಿಗೆ ವಿರೋಧವಾಗಿ ತನ್ನ ಕೈಗಳನ್ನು ಹಾಕಿದ್ದಾನೆ; ತನ್ನ ಒಡಂಬಡಿಕೆಯನ್ನು ಮುರಿದಿದ್ದಾನೆ.

21ಅವನ ಬಾಯಿ ಮಾತುಗಳು ಬೆಣ್ಣೆಗಿಂತ ನುಣುಪಾಗಿವೆ; ಅವನ ಹೃದ ಯವೋ ಕಲಹಮಯವೇ. ಅವನ ಮಾತುಗಳು ಎಣ್ಣೆ ಗಿಂತ ನಯವಾಗಿವೆ; ಆದರೆ ಅವು ಬಿಚ್ಚು ಕತ್ತಿಗಳಾಗಿವೆ.

22ನಿನ್ನ ಭಾರವನ್ನು ಕರ್ತನ ಮೇಲೆ ಹಾಕು; ಆತನು ನಿನಗೆ ಆಧಾರವಾಗಿರುವನು. ಆತನು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸನು.

ಕೀರ್ತನೆಗಳು 55 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी