೧ ಸಮುವೇಲನು 11:5

ಇಗೋ; ಸೌಲನು ಪಶುಗಳ ಹಿಂದೆ ಹೊಲದಿಂದ ಬಂದು--ಜನರು ಅಳುವದೇನು ಎಂದು ಕೇಳಿದನು. ಆಗ ಅವನಿಗೆ ಯಾಬೇಷಿನ ಜನರ ಮಾತುಗಳನ್ನು ವಿವರಿಸಿದರು.

ಸಂದರ್ಭದೊಂದಿಗೆ ಓದಿ · ೧ ಸಮುವೇಲನು 11

3ಅದಕ್ಕೆ ಯಾಬೇಷಿನ ಹಿರಿಯರು ಅವನಿಗೆ--ನಾವು ಇಸ್ರಾಯೇಲಿನ ಸಮಸ್ತ ಮೇರೆಗಳಿಗೆ ದೂತರನ್ನು ಕಳುಹಿಸುವ ಹಾಗೆ ನಮಗೆ ಏಳು ದಿವಸಗಳ ಗಡುವನ್ನು ಕೊಡು. ನಮ್ಮನ್ನು ರಕ್ಷಿಸು ವವರು ಯಾರೂ ಇಲ್ಲದೆ ಹೋದರೆ ಆಗ ನಾವು ನಿನ್ನ ಬಳಿಗೆ ಹೊರಟು ಬರುವೆವು ಅಂದರು.

4ದೂತರು ಸೌಲನು ಇರುವ ಗಿಬೆಯಕ್ಕೆ ಬಂದು ಜನರ ಕಿವಿಗಳಲ್ಲಿ ಆ ಮಾತುಗಳನ್ನು ಹೇಳಿದರು. ಆಗ ಜನರೆಲ್ಲರೂ ಗಟ್ಟಿಯಾಗಿ ಅತ್ತರು.

5ಇಗೋ; ಸೌಲನು ಪಶುಗಳ ಹಿಂದೆ ಹೊಲದಿಂದ ಬಂದು--ಜನರು ಅಳುವದೇನು ಎಂದು ಕೇಳಿದನು. ಆಗ ಅವನಿಗೆ ಯಾಬೇಷಿನ ಜನರ ಮಾತುಗಳನ್ನು ವಿವರಿಸಿದರು.

6ಸೌಲನು ಈ ಮಾತು ಗಳನ್ನು ಕೇಳಿದಾಗ ದೇವರ ಆತ್ಮನು ಅವನ ಮೇಲೆ ಬಂದನು; ಅವನು ಬಹು ಕೋಪೋದ್ರೇಕಗೊಂಡವ ನಾಗಿ

7ಒಂದು ಜೋಡಿ ಎತ್ತುಗಳನ್ನು ತೆಗೆದುಕೊಂಡು ಅವುಗಳನ್ನು ತುಂಡು ತುಂಡಾಗಿ ಕತ್ತರಿಸಿ ದೂತರ ಕೈಯಿಂದ ಇಸ್ರಾಯೇಲಿನ ಮೇರೆಗಳಿಗೆಲ್ಲಾ ಕಳುಹಿಸಿಸೌಲನ ಹಿಂದೆಯೂ ಸಮುವೇಲನ ಹಿಂದೆಯೂ ಹೊರಡದವನ ಪಶುಗಳಿಗೆ ಈ ಪ್ರಕಾರ ಮಾಡಲ್ಪಡು ವದೆಂದು ಹೇಳಿಸಿದನು. ಆಗ ಕರ್ತನಿಂದ ಉಂಟಾದ ಭಯ ಜನರ ಮೇಲೆ ಬಿದ್ದದ್ದರಿಂದ ಅವರು ಒಂದೇ ಮನಸ್ಸಿನಿಂದ ಹಾಗೆಯೇ ಹೊರಟು ಬಂದರು.

೧ ಸಮುವೇಲನು 11 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी