ತೊದಲು ಮಾತಿನವರು ಅನ್ಯಭಾಷಿಗಳು ಇವರ ಮೂಲಕವಾಗಿಯೇ ಆತನು ಈ ಜನರ ಸಂಗಡ ಮಾತನಾಡುತ್ತಾನೆ.
9ಈತನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಯಾರಿಗೆ ಬೋಧನೆಯನ್ನು ತಿಳುಕೊಳ್ಳುವ ಹಾಗೆ ಮಾಡುತ್ತಾನೆ? ಮೊಲೆಬಿಟ್ಟ ಕೂಸುಗಳಿಗೋ? ಎದೆ ಬಿಟ್ಟ ಮಕ್ಕಳಿಗೋ?
10ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ. ಇಲ್ಲಿ ಸ್ವಲ್ಪ.
11ತೊದಲು ಮಾತಿನವರು ಅನ್ಯಭಾಷಿಗಳು ಇವರ ಮೂಲಕವಾಗಿಯೇ ಆತನು ಈ ಜನರ ಸಂಗಡ ಮಾತನಾಡುತ್ತಾನೆ.
12ಆತನು ಮೊದಲು--ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ. ಬಳಲಿದವರನ್ನು ವಿಶ್ರಮಗೊಳಿಸಿರಿ, ನಿಮಗೆ ಅನುಕೂಲವಾದ ಉಪ ಶಮನ ಇದೇ ಎಂದು ಹೇಳಿದಾಗ್ಯೂ ಅವರು ಕೇಳ ಲಿಲ್ಲ.
13ಆದರೆ ಅವರು ಹೋಗಿ ಹಿಂದಕ್ಕೆ ಎಡವಿ ಮುರಿದುಕೊಳ್ಳುವ ಹಾಗೆಯೂ ಬೋನಿನಲ್ಲಿ ಹಿಡಿ ಯಲ್ಪಟ್ಟು ಸಿಕ್ಕಿಬೀಳುವ ಹಾಗೆಯೂ ಕರ್ತನ ವಾಕ್ಯವು ಅವರಿಗೆ ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ ಇರುವದು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ