ಯೆಶಾಯ 9:16

ಈ ಜನರನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ; ಅವರಿಂದ ನಡಿ ಸಲ್ಪಟ್ಟವರು ನಾಶವಾಗಿದ್ದಾರೆ.

ಸಂದರ್ಭದೊಂದಿಗೆ ಓದಿ · ಯೆಶಾಯ 9

14ಆದದರಿಂದ ಕರ್ತನು ಇಸ್ರಾಯೇಲಿನಿಂದ ತಲೆಬಾಲಗಳನ್ನೂ ಕೊಂಬೆ ರೆಂಬೆಗಳನ್ನೂ ಒಂದು ದಿನದಲ್ಲಿ ಕತ್ತರಿಸಿ ಹಾಕುವನು.

15ಹಿರಿಯನು ಮತ್ತು ಘನವುಳ್ಳವನು ತಲೆಯಾಗಿರುವನು; ಸುಳ್ಳುಬೋಧಿಸುವ ಪ್ರವಾ ದಿಯು ಬಾಲವಾಗಿರುವನು.

16ಈ ಜನರನ್ನು ನಡಿಸು ವವರು ದಾರಿತಪ್ಪಿಸುವವರಾಗಿದ್ದಾರೆ; ಅವರಿಂದ ನಡಿ ಸಲ್ಪಟ್ಟವರು ನಾಶವಾಗಿದ್ದಾರೆ.

17ಹೀಗಿರಲು ಕರ್ತನು ಅವರ ಯೌವನಸ್ಥರಲ್ಲಿ ಆನಂದಿಸುವದಿಲ್ಲ; ಅವರ ಅನಾಥರನ್ನೂ ವಿಧವೆಯರನ್ನೂ ಕರುಣಿಸುವದಿಲ್ಲ; ಪ್ರತಿಯೊಬ್ಬನು ಕಪಟಿಯೂ ಕೇಡು ಮಾಡುವವನೂ ಆಗಿದ್ದಾನೆ. ಎಲ್ಲರ ಬಾಯಿಯೂ ಮೂರ್ಖತನದ ಮಾತುಗಳನ್ನು ಆಡುತ್ತದೆ. ಆದದರಿಂದ ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇದೆ.

18ದುಷ್ಟತ್ವವು ಬೆಂಕಿಯಂತೆ ಉರಿದು ದತ್ತೂರಿ ಮುಳ್ಳುಗಳನ್ನು ನುಂಗಿಬಿಟ್ಟು ಅಡವಿಯ ಪೊದೆಗ ಳನ್ನು ಹತ್ತಿಕೊಳ್ಳಲು ಅದು ಹೊಗೆಹೊಗೆಯಾಗಿ ಸುತ್ತಿ ಕೊಂಡು ಮೇಲಕ್ಕೆ ಏರುತ್ತದೆ.

ಯೆಶಾಯ 9 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी