ಯಾಜಕಕಾಂಡ 1:3

ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು.

ಸಂದರ್ಭದೊಂದಿಗೆ ಓದಿ · ಯಾಜಕಕಾಂಡ 1

1ಕರ್ತನು ಮೋಶೆಯನ್ನು ಕರೆದು ಸಭೆಯಗುಡಾರದೊಳಗಿಂದ ಅವನೊಂದಿಗೆ ಮಾತನಾಡಿ ಹೇಳಿದ್ದೇನಂದರೆ--

2ಇಸ್ರಾಯೇಲ್‌ ಮಕ್ಕ ಳೊಂದಿಗೆ ಮಾತನಾಡಿ ಅವರಿಗೆ--ನಿಮ್ಮಲ್ಲಿ ಯಾವನಾ ದರೂ ಕರ್ತನಿಗೆ ಕಾಣಿಕೆಯನ್ನು ತರುವದಾದರೆ ನೀವು ನಿಮ್ಮ ಯಜ್ಞಗಳನ್ನು ಪಶುಗಳಿಂದಲೂ ಹಿಂಡು ಗಳಿಂದಲೂ ಮಂದೆಗಳಿಂದಲೂ ತರಬೇಕು.

3ಅವನ ಯಜ್ಞವು ಹಿಂಡಿನ ದಹನಬಲಿಯಾಗಿದ್ದರೆ ಅವನು ದೋಷವಿಲ್ಲದ ಗಂಡನ್ನು ಅರ್ಪಿಸಲಿ; ಅವನು ಅದನ್ನು ತನ್ನ ಸ್ವಇಚ್ಛೆಯಿಂದ ಕರ್ತನ ಮುಂದೆ ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಅರ್ಪಿಸಬೇಕು.

4ಅವನು ತನ್ನ ಕೈಯನ್ನು ದಹನಬಲಿಯ ತಲೆಯ ಮೇಲೆ ಇಡಬೇಕು: ಹೀಗೆ ಅದು ಅವನಿಗೋಸ್ಕರ ಅವನ ಪ್ರಾಯಶ್ಚಿತ್ತಕ್ಕಾಗಿ ಅಂಗೀಕಾರವಾಗುವದು.

5ಅವನು ಆ ಹೋರಿಯನ್ನು ಕರ್ತನ ಮುಂದೆ ವಧಿಸಬೇಕು; ಆಗ ಆರೋನನ ಕುಮಾರರಾದ ಯಾಜಕರು ರಕ್ತವನ್ನು ತಂದು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ಯಜ್ಞವೇದಿಯ ಸುತ್ತಲೂ ಚಿಮುಕಿಸಬೇಕು.

ಯಾಜಕಕಾಂಡ 1 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी