ನೀವು ನನ್ನ ಮಾತನ್ನು ಕೇಳದೆ ಈ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ
12ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವ ರಾಗಿರುವೆನು; ನೀವು ನನ್ನ ಜನರಾಗಿರುವಿರಿ.
13ಐಗುಪ್ತ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ ನಿಮ್ಮ ನೊಗದ ಕಟ್ಟುಗಳನ್ನು ಮುರಿದು ನಿಮ್ಮನ್ನು ನೆಟ್ಟಗೆ ನಡೆಯಮಾಡಿದ ನಿಮ್ಮ ದೇವರಾದ ಕರ್ತನು ನಾನೇ.
14ನೀವು ನನ್ನ ಮಾತನ್ನು ಕೇಳದೆ ಈ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ
15ನನ್ನ ನಿಯಮಗಳನ್ನು ನೀವು ಅಸಡ್ಡೆಮಾಡಿದರೆ ಇಲ್ಲವೆ ನನ್ನ ನಿರ್ಣಯಗಳಲ್ಲಿ ನಿಮ್ಮ ಪ್ರಾಣವು ಅಸಹ್ಯಪಟ್ಟರೆ ನೀವು ನನ್ನ ಒಡಂಬಡಿ ಕೆಯನ್ನು ವಿಾರಿ ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ
16ನಾನು ಸಹ ಇದನ್ನು ನಿಮಗೆ ಮಾಡು ವೆನು; ನಿಮ್ಮ ಮೇಲೆ ಭೀತಿಯನ್ನೂ ಕಣ್ಣುಗಳನ್ನು ಕ್ಷೀಣಿಸು ವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗು ವಂತೆಯೂ ಮಾಡುವ ಕ್ಷಯರೋಗವನ್ನು ಚಳಿಜ್ವರ ವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ನಿಮ್ಮ ಬೀಜವನ್ನು ಬಿತ್ತುವಿರಿ; ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು.
ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ