ನ್ಯಾಯಸ್ಥಾಪಕರು 18:24

ಅವನು--ನಾನು ಮಾಡಿಕೊಂಡ ನನ್ನ ದೇವರು ಗಳನ್ನೂ ಯಾಜಕನನ್ನೂ ತಕ್ಕೊಂಡು ಹೋದಿರಿ; ಇನ್ನು ನನಗೆ ಏನದೆ? ನೀವು ನನ್ನನ್ನು--ನಿನಗೆ ಏನಾಯಿತೆಂದು ಕೇಳುವದೇನು? ಅಂದನು.

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 18

22ಅವರು ವಿಾಕನ ಮನೆಯಿಂದ ದೂರವಾಗಿ ಹೋದಾಗ ವಿಾಕನ ಮನೆಯ ಸುತ್ತಲೂ ನೆರೆಮನೆ ಗಳಲ್ಲಿರುವ ಮನುಷ್ಯರು ಕೂಡಿಕೊಂಡು ದಾನ್ಯರನ್ನು ಸಂಧಿಸಿ ಅವರನ್ನು ಕೂಗಿದರು;

23ಅವರು ತಮ್ಮ ಮುಖ ತಿರುಗಿಸಿ ವಿಾಕನಿಗೆ--ನೀನು ಗುಂಪನ್ನು ಕೂಡಿಸಿ ಬರುವುದಕ್ಕೆ ನಿನಗೆ ಏನಾಯಿತು ಅಂದರು.

24ಅವನು--ನಾನು ಮಾಡಿಕೊಂಡ ನನ್ನ ದೇವರು ಗಳನ್ನೂ ಯಾಜಕನನ್ನೂ ತಕ್ಕೊಂಡು ಹೋದಿರಿ; ಇನ್ನು ನನಗೆ ಏನದೆ? ನೀವು ನನ್ನನ್ನು--ನಿನಗೆ ಏನಾಯಿತೆಂದು ಕೇಳುವದೇನು? ಅಂದನು.

25ಆದರೆ ದಾನ್ಯರು ಅವ ನಿಗೆ--ಕೋಪಿಷ್ಠರು ನಿನ್ನ ಮೇಲೆ ಬೀಳದ ಹಾಗೆ, ನೀನು ನಿನ್ನ ಪ್ರಾಣವನ್ನೂ ನಿನ್ನ ಮನೆಯವರ ಪ್ರಾಣ ವನ್ನೂ ಕಳಕೊಳ್ಳದ ಹಾಗೆ, ನಿನ್ನ ಸ್ವರ ನಮ್ಮಲ್ಲಿ ಕೇಳಿ ಸದೆ ಇರಲಿ ಅಂದರು.

26ದಾನ್ಯರು ತಮ್ಮ ಮಾರ್ಗ ವಾಗಿ ಹೋದರು. ಆಗ ಅವರು ತನಗಿಂತ ಬಲಿಷ್ಠ ರೆಂದು ವಿಾಕನು ನೋಡಿ ತಿರುಗಿಕೊಂಡು ತನ್ನ ಮನೆಗೆ ಹೋದನು.

ನ್ಯಾಯಸ್ಥಾಪಕರು 18 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी