ಹೋಶೇ 4:15

ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿ ದರೂ ಯೆಹೂದವು ಅಡ್ಡಿಯಾಗದಿರಲಿ, ಗಿಲ್ಗಾಲಿಗೆ ಹೋಗದೆ ಇಲ್ಲವೆ ಬೇತಾವೆನಿಗೆ ಏರದೆ ಕರ್ತನ ಜೀವದಾಣೆ ಎಂದು ಪ್ರಮಾಣಮಾಡದೆ ಇರ್ರಿ.

ಸಂದರ್ಭದೊಂದಿಗೆ ಓದಿ · ಹೋಶೇ 4

13ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸು ತ್ತಾರೆ; ಗುಡ್ಡಗಳ ಮೇಲೆ ಧೂಪವನ್ನು ಸುಡುತ್ತಾರೆ. ಅಲ್ಲೋನ್‌, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ಚೆನ್ನಾಗಿರುವದರಿಂದ ಹಾಗೆ ಮಾಡುತ್ತಾರೆ; ಆದದರಿಂದ ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವರು; ನಿಮ್ಮ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವರು.

14ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವಾಗಲೂ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವಾಗಲೂ ನಾನು ಶಿಕ್ಷಿಸುವದಿಲ್ಲ. ಯಾಕಂದರೆ ಸೂಳೆಯರ ಸಂಗಡ ತಮ್ಮನ್ನು ಬೇರ್ಪಡಿಸಿಕೊಂಡಿ ದ್ದಾರೆ; ಸೂಳೆಯರ ಸಂಗಡ ಬಲಿಅರ್ಪಿಸುತ್ತಾರೆ; ಆದದರಿಂದ ವಿವೇಕವಿಲ್ಲದ ಜನರು ಬಿದ್ದು ಹೋಗು ವರು.

15ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿ ದರೂ ಯೆಹೂದವು ಅಡ್ಡಿಯಾಗದಿರಲಿ, ಗಿಲ್ಗಾಲಿಗೆ ಹೋಗದೆ ಇಲ್ಲವೆ ಬೇತಾವೆನಿಗೆ ಏರದೆ ಕರ್ತನ ಜೀವದಾಣೆ ಎಂದು ಪ್ರಮಾಣಮಾಡದೆ ಇರ್ರಿ.

16ಹಿಂಜರಿಯುವ ಕಡಸಿನ ಹಾಗೆ ಇಸ್ರಾಯೇಲು ಹಿಂಜ ರಿಯುತ್ತದೆ; ಈಗ ಕರ್ತನು ವಿಸ್ತಾರ ಸ್ಥಳದಲ್ಲಿರುವ ಕುರಿಮರಿಯ ಹಾಗೆ ಅವರನ್ನು ಮೇಯಿಸುವನು.

17ಎಫ್ರಾಯಾಮನು ವಿಗ್ರಹಗಳಿಗೆ ಸೇರಿಕೊಂಡಿ ದ್ದಾನೆ, ಅವನನ್ನು ಬಿಟ್ಟುಬಿಡು.

ಹೋಶೇ 4 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी