ಯೆಹೆಜ್ಕೇಲನು 16:39

ಇದಲ್ಲದೆ ನಿನ್ನನ್ನು ಅವರ ಕೈಗಳಲ್ಲಿ ಒಪ್ಪಿಸುವೆನು. ಅವರು ನಿನ್ನ ಎತ್ತರ ಸ್ಥಳಗಳನ್ನೆಲ್ಲಾ ಕೆಡವಿಹಾಕಿ ನಿನ್ನ ಉನ್ನತ ಸ್ಥಾನ ಗಳನ್ನು ಒಡೆದು ಬಿಡುವರು; ಅವರು ನಿನ್ನ ವಸ್ತ್ರಗಳನ್ನು ತೆಗೆದುಹಾಕಿ ನಿನ್ನ ಸೌಂದರ್ಯವುಳ್ಳ ಆಭರಣಗಳನ್ನು ಕಸಿದುಕೊಂಡು ನಿನ್ನನ್ನು ಬರೀ ಬೆತ್ತಲೆಯನ್ನಾಗಿ ಮಾಡಿ ಬಿಟ್ಟು ಹೋಗುವರು.

ಸಂದರ್ಭದೊಂದಿಗೆ ಓದಿ · ಯೆಹೆಜ್ಕೇಲನು 16

37ಇಗೋ, ನೀನು ಆನಂದ ಪಟ್ಟವರೊಂದಿಗೆ ಪ್ರೀತಿ ಮಾಡಿದವರೆ ಲ್ಲರನ್ನೂ ಹಗೆಮಾಡಿದವರೆಲ್ಲರನ್ನೂ ಸಹ ಕೂಡಿಸು ವೆನು; ನಾನು ಅವರನ್ನು ನಿನಗೆ ವಿರುದ್ಧವಾಗಿ ಸುತ್ತಲೂ ಕೂಡಿಸಿ ಅವರಿಗೆ ನಿನ್ನ ಬೆತ್ತಲೆಯನ್ನು ಪ್ರಕಟಪಡಿಸು ವೆನು. ಆಗ ಅವರು ನಿನ್ನ ಬೆತ್ತಲೆಯನ್ನು ನೋಡುವರು.

38ದಾಂಪತ್ಯವನ್ನು ಮುರಿದು ರಕ್ತ ಸುರಿಸುವಂಥ ಹೆಂಗಸರಿಗೆ ವಿಧಿಸುವಂಥ ತಕ್ಕ ದಂಡನೆಗಳನ್ನು ನಿನಗೂ ವಿಧಿಸಿ, ಕೋಪೋದ್ರೇಕದಿಂದಲೂ ರೋಷಾವೇಶ ದಿಂದಲೂ ನಿನಗೆ ರಕ್ತವನ್ನು ಸುರಿಸುವೆನು.

39ಇದಲ್ಲದೆ ನಿನ್ನನ್ನು ಅವರ ಕೈಗಳಲ್ಲಿ ಒಪ್ಪಿಸುವೆನು. ಅವರು ನಿನ್ನ ಎತ್ತರ ಸ್ಥಳಗಳನ್ನೆಲ್ಲಾ ಕೆಡವಿಹಾಕಿ ನಿನ್ನ ಉನ್ನತ ಸ್ಥಾನ ಗಳನ್ನು ಒಡೆದು ಬಿಡುವರು; ಅವರು ನಿನ್ನ ವಸ್ತ್ರಗಳನ್ನು ತೆಗೆದುಹಾಕಿ ನಿನ್ನ ಸೌಂದರ್ಯವುಳ್ಳ ಆಭರಣಗಳನ್ನು ಕಸಿದುಕೊಂಡು ನಿನ್ನನ್ನು ಬರೀ ಬೆತ್ತಲೆಯನ್ನಾಗಿ ಮಾಡಿ ಬಿಟ್ಟು ಹೋಗುವರು.

40ಅವರು ನಿನಗೆ ವಿರುದ್ಧವಾಗಿ ಒಂದು ಕೂಟವನ್ನು ಕರಕೊಂಡು ಬಂದು ಕಲ್ಲುಗಳನ್ನು ನಿನ್ನ ಮೇಲೆ ಎಸೆದು, ತಮ್ಮ ಕತ್ತಿಗಳಿಂದ ನಿನ್ನನ್ನು ತಿವಿಯುವರು.

41ಅವರು ನಿನ್ನ ಮನೆಗಳನ್ನು ಸುಟ್ಟು ಬಹಳ ಸ್ತ್ರೀಯರ ಕಣ್ಣುಗಳ ಮುಂದೆ ನಿನಗೆ ನ್ಯಾಯ ತೀರಿಸುವರು; ನೀನು ವ್ಯಭಿಚಾರ ಮಾಡುವದನ್ನು ನಾನು ನಿಲ್ಲಿಸುವೆನು; ಆಗ ನೀನು ಕೂಲಿ ಸಹ ಕೊಡುವದನ್ನು ನಿಲ್ಲಿಸುವೆನು;

ಯೆಹೆಜ್ಕೇಲನು 16 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी