ಆದಿಕಾಂಡ 17:14

ಸುನ್ನತಿಯಾಗದ ಗಂಡಸಿಗೆ ನನ್ನ ಒಡಂಬಡಿಕೆಯನ್ನು ವಿಾರಿದ ಕಾರಣ ಅವನು ಜನರೊಳಗಿಂದ ತೆಗೆದುಹಾಕಲ್ಪಡಬೇಕು ಅಂದನು.

ಸಂದರ್ಭದೊಂದಿಗೆ ಓದಿ · ಆದಿಕಾಂಡ 17

12ನಿಮ್ಮ ವಂಶಾವಳಿಗಳಲ್ಲಿ ಪ್ರತಿಯೊಂದು ಗಂಡು ಮಗುವಿಗೆ ಎಂಟು ದಿನಗಳಾದ ಮೇಲೆ ಸುನ್ನತಿಮಾಡಿಸಬೇಕು; ಮನೆಯಲ್ಲಿ ಹುಟ್ಟಿದವನಾಗಲಿ ನಿನ್ನ ಸಂತತಿಯಲ್ಲದೆ ಪರರ ಮಕ್ಕಳನ್ನು ಹಣಕೊಟ್ಟು ಕೊಂಡುಕೊಳ್ಳಲ್ಪಟ್ಟವರಾಗಲಿ

13ನಿನ್ನ ಮನೆಯಲ್ಲಿ ಹುಟ್ಟಿದವನಿಗೂ ನಿನ್ನ ಹಣದಿಂದ ಕೊಂಡುಕೊಂಡ ವನಿಗೂ ಸುನ್ನತಿಮಾಡಿಸತಕ್ಕದ್ದು. ಹೀಗೆ ನನ್ನ ಒಡಂಬಡಿಕೆಯು ನಿಮ್ಮ ಶರೀರದಲ್ಲಿ ನಿತ್ಯವಾದ ಒಡಂಬಡಿಕೆಯಾಗಿರುವದು.

14ಸುನ್ನತಿಯಾಗದ ಗಂಡಸಿಗೆ ನನ್ನ ಒಡಂಬಡಿಕೆಯನ್ನು ವಿಾರಿದ ಕಾರಣ ಅವನು ಜನರೊಳಗಿಂದ ತೆಗೆದುಹಾಕಲ್ಪಡಬೇಕು ಅಂದನು.

15ಇದಲ್ಲದೆ ದೇವರು ಅಬ್ರಹಾಮನಿಗೆ--ನಿನ್ನ ಹೆಂಡತಿಯಾದ ಸಾರಯಳ ವಿಷಯದಲ್ಲಾದರೋ ಆಕೆಯನ್ನು ಸಾರಯಳೆಂದು ಕರೆಯಬೇಡ; ಅವಳ ಹೆಸರು ಸಾರಾ.

16ಆಕೆಯನ್ನು ನಾನು ಆಶೀರ್ವದಿ ಸುತ್ತೇನೆ. ಆಕೆಯಿಂದ ನಿನಗೆ ಒಬ್ಬ ಮಗನನ್ನು ಸಹ ಕೊಡುತ್ತೇನೆ. ಹೌದು, ಜನಾಂಗಗಳ ತಾಯಿಯಾ ಗುವಂತೆ ಆಕೆಯನ್ನು ಆಶೀರ್ವದಿಸುತ್ತೇನೆ. ಆಕೆಯಿಂದ ಜನರ ಅರಸರು ಹುಟ್ಟುವರು ಅಂದನು.

ಆದಿಕಾಂಡ 17 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी