ನ್ಯಾಯಸ್ಥಾಪಕರು 20:31

ಆಗ ಬೆನ್ಯಾವಿಾನನ ಮಕ್ಕಳು ಇಸ್ರಾ ಯೇಲ್‌ ಜನಕ್ಕೆ ಎದುರಾಗಿ ಹೊರಟು ಪಟ್ಟಣದ ಬಳಿಯಿಂದ ಹೊರಬಂದು ಅಡವಿಯಲ್ಲಿ ಹೆದ್ದಾರಿ ಯಾದ ಬೇತೇಲಿಗೂ ಗಿಬೆಯಕ್ಕೂ ಹೋಗುವ ಎರಡು ಮಾರ್ಗಗಳಲ್ಲಿ ಇಸ್ರಾಯೇಲ್‌ ಜನರೊಳಗೆ ಮೊದಲಿನ ಹಾಗೆಯೇ ಹೆಚ್ಚು ಕಡಿಮೆ ಮೂವತ್ತು ಜನರನ್ನು ಹೊಡೆದು ಕೊಲ್ಲಲಾರಂಭಿಸಿದಾಗ

ಸಂದರ್ಭದೊಂದಿಗೆ ಓದಿ · ನ್ಯಾಯಸ್ಥಾಪಕರು 20

29ಇಸ್ರಾಯೇಲ್ಯರು ಗಿಬೆಯದ ಸುತ್ತಲೂ ಹೊಂಚಿ ನೋಡುವವರನ್ನಿಟ್ಟರು.

30ಮೂರನೇ ದಿನದಲ್ಲಿ ಇಸ್ರಾಯೇಲ್‌ ಮಕ್ಕಳು ಬೆನ್ಯಾವಿಾನನ ಮಕ್ಕಳಿಗೆ ಎದುರಾಗಿ ಹೋಗಿ ಮೊದಲು ಎರಡು ಸಾರಿ ಮಾಡಿದ ಹಾಗೆಯೇ ಗಿಬೆಯದ ಸವಿಾಪದಲ್ಲಿ ವ್ಯೂಹವನ್ನು ಕಟ್ಟಿದರು.

31ಆಗ ಬೆನ್ಯಾವಿಾನನ ಮಕ್ಕಳು ಇಸ್ರಾ ಯೇಲ್‌ ಜನಕ್ಕೆ ಎದುರಾಗಿ ಹೊರಟು ಪಟ್ಟಣದ ಬಳಿಯಿಂದ ಹೊರಬಂದು ಅಡವಿಯಲ್ಲಿ ಹೆದ್ದಾರಿ ಯಾದ ಬೇತೇಲಿಗೂ ಗಿಬೆಯಕ್ಕೂ ಹೋಗುವ ಎರಡು ಮಾರ್ಗಗಳಲ್ಲಿ ಇಸ್ರಾಯೇಲ್‌ ಜನರೊಳಗೆ ಮೊದಲಿನ ಹಾಗೆಯೇ ಹೆಚ್ಚು ಕಡಿಮೆ ಮೂವತ್ತು ಜನರನ್ನು ಹೊಡೆದು ಕೊಲ್ಲಲಾರಂಭಿಸಿದಾಗ

32ಬೆನ್ಯಾವಿಾನನ ಮಕ್ಕಳು--ಅವರು ಮೊದಲಿನ ಹಾಗೆಯೇ ನಮ್ಮ ಮುಂದೆ ಮುರಿಯಲ್ಪಡುತ್ತಾರೆ ಅಂದುಕೊಂಡರು. ಆದರೆ ಇಸ್ರಾಯೇಲ್‌ ಮಕ್ಕಳು--ಅವರನ್ನು ಪಟ್ಟಣದ ಬಳಿಯಿಂದ ಹೆದ್ದಾರಿಗಳಿಗೆ ಎಳಕೊಳ್ಳುವ ಹಾಗೆ ನಾವು ಓಡಿಹೋಗೋಣ ಎಂದು ಅಂದುಕೊಂಡರು.

33ಇಸ್ರಾಯೇಲ್‌ ಮಕ್ಕಳೆಲ್ಲರೂ ತಮ್ಮ ಸ್ಥಳದಲ್ಲಿಂದ ಎದ್ದು ಬಾಳ್‌ತಾಮರಿನಲ್ಲಿ ವ್ಯೂಹವನ್ನು ಕಟ್ಟಿದರು. ಆಗ ಗಿಬೆಯದ ಗವಿಯಲ್ಲಿ ಹೊಂಚಿ ನೋಡುತ್ತಿದ್ದ ಇಸ್ರಾಯೇಲ್ಯರು ಹೊರಟುಬಂದರು.

ನ್ಯಾಯಸ್ಥಾಪಕರು 20 ಸಂಪೂರ್ಣವಾಗಿ ಓದಿ

ಈ ವಚನವನ್ನು ಇತರ ಭಾಷೆಗಳಲ್ಲಿಯೂ ಓದಿ

KJV தமிழ் తెలుగు हिन्दी